Home ಜಿಲ್ಲೆ ಕಳ್ಳತನ: ಆರೋಪಿ ಬಂಧನ

ಕಳ್ಳತನ: ಆರೋಪಿ ಬಂಧನ

ಲಕ್ಷೆ÷್ಮÃಶ್ವರ,ಮೇ.೫:ಏಪ್ರಿಲ್ ೧೦ರಂದು ಪಟ್ಟಣದ ಬಸ್ ನಿಲ್ದಾಣದಲ್ಲಿ ಬಂಗಾರದ ಆಭರಣ ಕಳ್ಳತನ,ಹಾಗೂ ಏಪ್ರಿಲ್ ೨೫ರಂದು ಬಸ್ ನಿಲ್ದಾಣದಲ್ಲಿ ಹಣ ಕದ್ದ ಆರೋಪದಡಿಯಲ್ಲಿ ಮಹಾರಾಷ್ಟçದ ಪಾಂಗರಮಲ್ ಗ್ರಾಮದ ರಾಜವೀರ ಕಾಳೆ ಎಂಬ ಕಳ್ಳನನ್ನು ಬಂದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಆರೋಪಿ ಕಡೆಯಿಂದ ಬಂಗಾರದ ಆಭರಣ, ಹಾಗೂ ನಗದು ವಶಪಡಿಸಿಕೊಂಡಿದ್ದು,ಕೃತ್ಯಕ್ಕೆ ಬಳಸಿದ ಒಂದು ಮೋಟಾರ ಸೈಕಲ್ಲನ್ನು ವಶಪಡಿಸಿಕೊಂಡಿದ್ದಾರೆ,
ಆರೋಪಿಯ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಟಾದಿಕಾರಿ ರೋಹನ ಜಗದೀಶ,ಡಿ ಎಸ್ ಪಿ ಉಪ ವಿಭಾಗ ಗದಗ ಇವರ ಮಾರ್ಗದರ್ಶನದಲ್ಲಿ ಶಿರಹಟ್ಟಿ ಸಿಪಿಐ ಬಿ ವಿ ನ್ಯಾಮಗೌಡ, ಪಿ ಎಸ್ ಐ ನಾಗರಾಜ ಗಡದ, ಅಪರಾದ ವಿಭಾಗದ ಪಿ ಎಸ್ ಐ ಟಿ ಕೆ ರಾಠೋಡ ಇವರನ್ನೊಳಗೊಂಡ ತಂಡ ರಚಿಸಿ ಪತ್ತೆ ಕಾರ್ಯ ಕೈ ಗೊಂಡಿದ್ದರು.


ಆರೋಪಿ ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪ್ರೋ ಪಿ ಎಸ್ ಐ ಪೂಜಾ ಪಾರ್ಥನಳ್ಳಿ, ಆನಂದಸಿAಗ ದೊಡ್ಡಮನಿ, ಸಿಬ್ಬಂದಿಗಳಾದ ಡಿ ಎಸ್ ನದಾಫ, ಪಿ ಡಿ ಮ್ಯಾಗೇರಿ,ಎಚ್ ಐ ಕಲ್ಲಣ್ಣವರ,ಆರ್ ಎಸ್ ಯರಗಟ್ಟಿ,ಎಂ ಎ ಶೇಖ, ಎಂ ಎಸ್ ಬಳ್ಳಾರಿ, ಆನಂದ ಕಮ್ಮಾರ, ಸಿ ಎಸ್ ಮಠಪತಿ, ಎ ಎಲ್ ಕರ್ಜಗಿ, ಮದುಚಂದ್ರ ಧಾರವಾಡ,ಮಾರ್ತಾoಡಪ್ಪ ಉಪ್ಪಾರ, ಎಸ್ ಡಿ ಭೂತಪ್ಪನವರ, ಹಾಗೂ ಗುರು ಬೂದಿಹಾಳ, ಸಂಜು ಕೊರಡೂರ ಅಪ್ಪಣ್ಣ ರಾಠೋಡ, ಇವರಗಳ ಕಾರ್ಯಕ್ಕೆ ಜಿಲ್ಲಾ ಎಸ್ ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ