
ಕಲಬುರಗಿ, ಏ.30- ಮಹಾನಗರದ ಅಡ್ವೊಕೇಟ್ ಕಾಲೊನಿಯ ಶ್ರೀಮಹಾನಲಕ್ಷ್ಮೀ ದೇವಸ್ಥಾನದ ಬೀಗ ಮುರಿದು ಚಿನ್ನಾಭರಣ ಕದ್ದ ಕಳ್ಳನನ್ನು ಬಂಧಿಸುವಲ್ಲಿ ಸ್ಟೇಷನ್ ಬಜಾರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ತಿಂಗಳು ಶ್ರೀಮಹಾನಲಕ್ಷ್ಮೀ ದೇವಸ್ಥಾನದ ಬೀಗ ಮುರಿದ ಕಳ್ಳನೊಬ್ಬ, ದೇವಿಯ ಮೂರ್ತಿಯ 7 ಗ್ರಾಂ ಚಿನ್ನದ ತಾಳಿ (90 ಸಾವಿರ), ಮತ್ತೊಂದು ಸಣ್ಣ ಮೂರ್ತಿಯ 2 ಗ್ರಾಂ ಚಿನ್ನದ ತಾಳಿ (20 ಸಾವಿರ) ಹಾಗೂ 100 ಗ್ರಾಂ ಬೆಳ್ಳಿಯ ದೇವಿಯ ಮೂರ್ತಿ (20 ಸಾವಿರ) ಒಟ್ಟು 1.37 ಮೌಲ್ಯದ ಚಿನ್ನನ್ನಾಭರಣ ಕದ್ದು ಪರಾರಿಯಾಗಿರುವ ಪ್ರಕರಣ ಸ್ಟೇಷನ ಬಜಾರ ಠಾಣೆಯಲ್ಲಿ ದಾಖಲಾಗಿತ್ತು.
ನಗರ ಪೊಲೀಸ ಆಯುಕ್ತ ಶರಣಪ್ಪ ಎಸ್.ಡಿ, ಉಪ ಆಯುಕ್ತ ಪ್ರವೀಣ ನಾಯಕ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ ಆಯುಕ್ತ ಎನ್.ಎಚ್.ಸುಬೇದಾರ ಮತ್ತು ಸ್ಟೇಷನ ಬಜಾರ ಠಾಣೆಯ ಪಿಐ ಗುರುಲಿಂಗಪ್ಪಗೌಡ ಪಾಟೀಲ ನೇತೃತ್ವದ ತಂಡ ದಾಳಿ ನಡೆಸಿ ಕಳ್ಳತನದ ಆರೋಪಿ ಮೊಹ್ಮದ ಅಹ್ಮದ ತಂದೆ ಮೊಹ್ಮದ ನಯಿಮ್ ಸಾ.ಅಫಜಲಪೂರ ಹಾಲಿ ವಸ್ತಿ ಹಾಗರಗಾ ಕಲಬುರಗಿ ಎಂಬುವವರನ್ನು ಬಂಧಿಸಿ ಆತನಿಂದ 1.37 ಮೌಲ್ಯದ ಚಿನ್ನಾಭರಣ ಜಪ್ತಿಮಾಡಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.






















