Home ಜಿಲ್ಲೆ ಕಲಬುರಗಿ ನಾವೀನ್ಯ ಬೋಧನೆಗೆ ಶಿಕ್ಷಕರು ಅಪ್‍ಡೇಟ್ ಆಗಬೇಕು

ನಾವೀನ್ಯ ಬೋಧನೆಗೆ ಶಿಕ್ಷಕರು ಅಪ್‍ಡೇಟ್ ಆಗಬೇಕು

ಕಲಬುರಗಿ:ಮಾ.11: ಹೊಸ ವಿಷಯಗಳಿಗೆ ಶಿಕ್ಷಕ ಸಮೂಹ ಅಪ್‍ಡೇಟ್ ಆಗಬೇಕು. ಜ್ಞಾನ ಮತ್ತು ಕಲಿಕೆ ಯಾರೊಬ್ಬರ ಸ್ವತ್ತಲ್ಲ. ಬೋಧನೆಯಲ್ಲಿ ಹೊಸತನ, ವೈಜ್ಞಾನಿಕ ವಿಷಯ, ನಾವೀನ್ಯ ವಿಧಾನ ಅಳವಡಿಕೆಯೊಂದಿಗೆ ಉತ್ಕøಷ್ಟ ಜ್ಞಾನಶಕ್ತಿಯನ್ನು ಗಳಿಸಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಶಶಿಕಾಂತ್ ಎಸ್ ಉಡಿಕೇರಿ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಮಂಥನ ಸಭಾಂಗಣದಲ್ಲಿ ರೂಸಾ/ಪಿಎಂ-ಉμÁ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ, ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ರಿಲಯನ್ಸ್ ಫೌಂಡೇಶನ್ ಸ್ಕಿಲ್ಲಿಂಗ್ ಅಕಾಡೆಮಿ ಮತ್ತು ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿದ ಫ್ಯಾಕಲ್ಟಿ ಡೆವಲಪ್‍ಮೆಂಟ್ ಪೆÇ್ರೀಗ್ರಾಂ (ಎಫ್‍ಡಿಪಿ) “ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾವೀನ ಬೋಧನಾ ತಂತ್ರಗಳು ಮತ್ತು ಪಠ್ಯಕ್ರಮ ಚೌಕಟ್ಟು” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಉನ್ನತ ಶಿಕ್ಷಣ ಬೋಧನೆ ಮತ್ತು ಪಠ್ಯ ವಿಷಯಗಳಲ್ಲಿ ಪ್ರಾಯೋಗಿಕ ಜ್ಞಾನ ಅವಶ್ಯಕ. ಪಠ್ಯ ವಿಷಯಗಳನ್ನು ತಂತ್ರಜ್ಞಾನ ಬಳಕೆಯೊಂದಿಗೆ ಶಿಕ್ಷಕರು ಉತ್ಕøಷ್ಟ ಬೋಧನೆಯಲ್ಲಿ ಶಕ್ತಿಯಾಗಬೇಕು. ವಿದ್ಯಾರ್ಥಿಗಳ ಜ್ಞಾನ ಮಟ್ಟ ಅರಿತು ಕಲಿಸುವುದು ಅಗತ್ಯವಿದೆ. ಅವಶ್ಯಕತೆಗೆ ಮತ್ತು ಅವಕಾಶಗಳಿಗೆ ಅನುಗುಣವಾಗಿ ಕಲಿಸುವ ಆಸಕ್ತಿಯನ್ನು ಬೋಧಕರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್. ಟಿ. ಪೋತೆ ಮುಖ್ಯ ಅತಿಥಿಯಾಗಿ ಮಾತನಾಡಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಸಾಂಪ್ರದಾಯಿಕ ಕಲಿಕೆಗಿಂತ ಬೋಧನೆಯಲ್ಲಿ ನಾವೀನ್ಯತೆ ಮತ್ತು ಸೃಜನಶೀಲತೆಗೆ ಒತ್ತು ನೀಡಬೇಕು. ವಿದ್ಯಾರ್ಥಿ ಕೇಂದ್ರಿತ ಬೋಧನೆಯಿಂದ ವಿದ್ಯಾರ್ಥಿಗಳನ್ನು ನೈಜ ಪ್ರಪಂಚದ ಕಡೆಗೆ ಸೆಳೆಯಬೇಕಿದೆ. ವೈಜ್ಞಾನಿಕ ಮನೋಭಾವನೆ ಮತ್ತು ಉದ್ಯೋಗಾರ್ಹ ಕೌಶಲ್ಯಗಳನ್ನು ಬೆಳೆಸಿ ಉನ್ನತ ಗುರಿ ಸಾಧನೆಗೆ ಸಿದ್ದಗೊಳಿಸುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದರು.
ಬೋಧನೆಯಲ್ಲಿ ತಂತ್ರಜ್ಞಾನ ಬಳಸುವುದು ಒಂದು ಬಾಗ. ಆದರೆ, ತಂತ್ರಜ್ಞಾನದಿಂದ ಸೃಜನಶೀಲತೆ ಮಾಯವಾಗಬಾರದು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸತ್ಯ, ನಿಖರ ಮತ್ತು ಆಧಾರವಾಗಿರುವ ಪುಸ್ತಕ ಮತ್ತು ಗ್ರಂಥ ಕೇಂದ್ರಿತ ವಿಚಾರಗಳ ಕಡೆಗೆ ಆಕರ್ಷಣೆ ಬೆಳೆಸಿಕೊಳ್ಳಬೇಕು. ವಿನೂತನ ಬೋಧನೆ ಶೈಲಿಯಿಂದ ವಾಸ್ತವ ಜಗತ್ತು, ವೈಚಾರಿಕ ಚಿಂತನೆ ಮತ್ತು ವೈಜ್ಞಾನಿಕ ಅರಿವಿನ ಪ್ರಪಂಚವನ್ನು ಪ್ರವೇಶಿಸುವ ಮೂಲಕ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ಮೌಲ್ಯಮಾಪನ ಕುಲಸಚಿವ ಪೆÇ್ರ. ಎನ್.ಜಿ. ಕಣ್ಣೂರು. ಅನ್ವಯಿಕ ವಿದ್ಯುನ್ಮಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಕಾರ್ಯಕ್ರಮ ಸಂಯೋಜಕ ಪ್ರೊ. ಆರ್. ಎಲ್ ರಾಯಭಾಗಕರ್ ಅತಿಥಿಗಣ್ಯರನ್ನು ಸ್ವಾಗತಿದರು. ಡಾ. ಮಂಜುರ ಅಹ್ಮದ್ ದಖ್ಖಾನಿ, ಡಾ. ಮಂಜುಳ ಬೋವಿ, ಡಾ. ಅನಿಲ್ ಕುಮಾರ್ ಹಾಲು, ಡಾ. ಸಾವಿತ್ರಿ ಹಾಗೂ ಡಾ. ಹನುಮಂತರಾಯ ರಾಂಪೂರೆ ಅನಿಸಿಕೆ ವ್ಯಕ್ತಪಡಿಸಿದರು. ರೂಸಾ-ಪಿಎಂ ಉಷಾ ನೋಡಲ್ ಅಧಿಕಾರಿ ಡಾ. ವಿದ್ಯಾಧರ ಎಸ್. ಮೇಲಕೇರಿ ಎರಡು ದಿನಗಳ ಕಾರ್ಯಕ್ರಮ ಮತ್ತು ಗೋಷ್ಠಿ ವರದಿ ಮಂಡಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮ್ಯಾಜಿಕ್ ಬಸ್ ಇಂಡಿಯಾ ತರಬೇತಿ ಅಧಿಕಾರಿ ಜೋಶುವಾ ಡೇನಿಯಲ್, ಜೆಕಾರ್ತಿಕೇಯ ತರಬೇತಿ ಸಲಹಾ ಸಂಸ್ಥೆಯ ಸಿಇಓ ಡಾ. ಅಭಯ್ ಸರ್ದೇಶ್‍ಪಾಂಡೆ, ರಿಲಯನ್ಸ್ ಫೌಂಡೇಶನ್ ಸ್ಕಿಲ್ಲಿಂಗ್ ಅಕಾಡೆಮಿ ಸದಸ್ಯರಾದ ರೇಖಾ ಕುಮಾರಿ, ಜಾಬೆಜ್, ಪೌಜಿತ ಇದ್ದರು.

ವಿವಿಧ ನಿಕಾಯಗಳ ಡೀನರು, ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ಸ್ನಾಕತೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಪದವಿ ಮಹಾವಿದ್ಯಾಲಯಗಳ ಅಧ್ಯಾಪಕರು ಭಾಗವಹಿಸಿದ್ದರು. ಸಂಗೀತ ವಿಭಾಗದ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕ ಡಾ. ಎಂ. ಬಿ. ಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಹೊಸದನ್ನು ಓದಿದಾಗ ಮಾತ್ರ ಹೊಸದನ್ನು ಕಲಿಸಲು ಸಾಧ್ಯ. ನಾವೀನ್ಯ ಬೋಧನಾ ಕೌಶಲ್ಯದಿಂದ ಸೃಜನಶೀತೆ, ಕ್ರಿಯಾಶೀಲತೆ ಮತ್ತು ವಿನೂತನ ಆಲೋಚನೆಗೆ ಮಹತ್ವ ನೀಡಬೇಕು. ಸಂವಹನ, ಸಂವೇದನೆ, ಸಂವಾದಾತ್ಮಕ, ಚರ್ಚೆಗಳು ನಡೆಯಬೇಕು. ಯಾಂತ್ರಿಕತೆ ಮತ್ತು ತಾಂತ್ರಿಕ ಕೌಶಲ್ಯದ ಜೊತೆಗೆ ಸೃಜನಶೀಲ ಬೋಧನಾ ಕಲೆಯನ್ನು ಅಧ್ಯಾಪಕರು ರೂಢಿಸಿಕೊಳ್ಳಬೇಕು. ಹೊಸ ಜ್ಞಾನದಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಂಚಿತರಾಗಬಾರದು. ಓದು, ಬರೆದು ಬೋಧನೆ ಮಾಡಬೇಕು. ಹೊಸ ವಿಚಾರ ಕೇಂದ್ರಿತ ಅಧ್ಯಯನ, ಬೋಧನೆ ಮತ್ತು ಪ್ರಾತ್ಯಕ್ಷಿಕೆ ಬಹಳ ಮುಖ್ಯ.

  • ಪ್ರೊ. ಎಚ್. ಟಿ. ಪೋತೆ
    ಡೀನರು, ಕಲಾ ನಿಕಾಯ, ಗುಲಬರ್ಗಾ ವಿಶ್ವವಿದ್ಯಾಲಯ