
ಕಲಬುರಗಿ ;ನ.1: ತಂಬಾಕು ಹಾಗೂ ಇದರ ಮಾದಕ ವಸ್ತುಗಳನ್ನು ಸೇವನೆ ಮಾಡುವುದರಿಂದ ದೇಹದ
ಮೇಲೆ ಆಗುವ ದುಷ್ಪರಿಣಾಮ ಹಾಗೂ ಕುಟುಂಬದ ಮೇಲಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರೂ ತಿಲೀದುಕೊಳ್ಳುವುದು ಅವಶ್ಯಕ ಪೆÇ್ರೀ.ವಿಜಯರೆಡ್ಡಿ ವಂದಲಿ ಹೇಳಿದರು.
ನಗರದ ಶ್ರೀ ಗೋಪಾಲದೇವ ಜಾಧವ್ ನಸಿರ್ಂಗ್ ಕಾಲೇಜಿನಲ್ಲಿ ನಶಾ ಮುಕ್ತ ಭಾರತ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ರೋಗಗಳಿಗಿಂತ ತಂಬಾಕು ಹಾಗೂ ಮಾದಕ ವಸ್ತುಗಳನ್ನು ಸೇವಿಸುವವರು ಜಾಸ್ತಿ ಮರಣ ಹೊಂದುತ್ತಾರೆ. ಕಾಲೇಜಿನ ಯುವಕ ಹಾಗೂ ಯುವತಿಯರು ಇದರಿಂದ ದೂರ ಇರಬೇಕು ಹಾಗೂ ನಸಿರ್ಂಗ್ ವಿದ್ಯಾರ್ಥಿಗಳು ಜನರಲ್ಲಿ ತಿಳುವಳಿಕೆ ಹೇಳಬೇಕು ಎಂದು ಹೇಳಿದರು.
ಇದೇ ಸಮಾರಂಭದಲ್ಲಿ ಬಿ.ಎಸ್ಸಿ. ನಸಿರ್ಂಗ್ ವಿದ್ಯಾರ್ಥಿಗಳು ವಸ್ತುಗಳ ಸೇವನೆಯಿಂದ ಆಗುವ ದುಷ್ಟಪರಿಣಾಮಗಳ ಬಿತ್ತಿ ಚಿತ್ರಗಳನ್ನು ಪ್ರದಶ್ರೀದರು. ಪ್ರಕಾಶ್ ಅವರು ಬಿ.ಎಸ್ಸಿ. ನಸಿರ್ಂಗ್ ವಿದ್ಯಾರ್ಥಿಗಳಿಗೆ ಪ್ರತಿಜ್ಞೆಯ ವಿಧಿ ಬೋಧಿಸಿದರು. ಬಿ.ಎಸ್ಸಿ. ಎರಡನೇ ಸೆಮಿಸ್ಟರ್ ವಿದ್ಯಾರ್ಥಿ ಅಭಿಷೇಕ ಮಾತನಾಡಿ ನಶಾ ಮುಕ್ತ ಭಾರತ ಮಾಡುವುದ ನಮ್ಮ ಅಧ್ಯ ಕರ್ತವ್ಯವಾಗಿದೆ ಎಂದು ಹೇಳಿದರು .
ಈ ಸಂಧರ್ಭದಲ್ಲಿ ಕಾಲೇಜಿನ ಬೋಧಕ, ಬೋಧಕೇತ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.





























