
ಕಲಬುರಗಿ,ಏ.25-ಇತ್ತೀಚಿಗೆ ಪ್ರಕಟಗೊಂಡ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಹೆಚ್ಚಿನ ಅಂಕ ಪಡೆದ 6 ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಮಕ್ಕಳಿಗೆ ಪೆÇ್ರೀತ್ಸಾಹಿಸಿದರು.
625ರ ಪೈಕಿ 623 ಅಂಕ ಪಡೆದು ಶೇ.99.68 ಪ್ರತಿಶತದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ಕಲಬುರಗಿ ದಕ್ಷಿಣ ವಲಯದ ಸಾವಳಗಿಯ ಅಜೀಮ್ ಪ್ರೇಮ್ ಜಿ ಶಾಲೆಯ ವಿದ್ಯಾರ್ಥಿ ಗಣೇಶ, ತಲಾ 622 ಅಂಕ ಪಡೆದು ಎರಡನೇ ಸ್ಥಾನ ಹಂಚಿಕೊಂಡಿರುವ ಕಲಬುರಗಿಯ ಶರಣಬಸವೇಶ್ವರ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ಮಾಧವಿ, ಮೇಘನಾ ಮತ್ತು 620 ಅಂಕ ಪಡೆದು ತೃತೀಯ ಸ್ಥಾನ ಪಡೆದಿರುವ ಕಲಬುರಗಿಯ ಜಗತ್ ಪ್ರದೇಶದ ಎಸ್.ಸಿ-ಎಸ್.ಟಿ ಪ್ರತಿಭಾನಿತ್ವ ಶಾಲೆಯ ಭಾಗ್ಯಶ್ರಿ, ಎಸ್.ಆರ್.ಎನ್.ಮೆಹತಾ ಶಾಲೆಯ ಓಂಕಾರ ಹಸು ಹಾಗೂ ಜೇವರ್ಗಿ ತಾಲೂಕಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ನಿಸರ್ಗಾ ಅವರನ್ನು ಡಿ.ಸಿ. ಅವರು ವಿಶೇಷವಾಗಿ ಸತ್ಕರಿಸಿ ಮೆಚ್ಚುಗೆಯ ಮಾತುಗಳನ್ನಾಡಿದರು. ಡಿ.ಡಿ.ಪಿ.ಐ ಶಂಕ್ರಮ ಢವಳಗಿ ಸೇರಿದಂತೆ ವಿದ್ಯಾರ್ಥಿಗಳು ಪಾಲಕರು ಇದ್ದರು.






















