
ಕಲಬುರಗಿ :ಏ.27: ಶ್ರೀನಿವಾಸ ರಾಮಾನುಜನ್ ವಿಶ್ವದ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬರಾಗಿದ್ದು, ಸಂಖ್ಯಾ ಸಿದ್ಧಾಂತ ಮತ್ತು ಗಣಿತ ವಿಶ್ಲೇಷಣೆಯಲ್ಲಿ ಅವರ ಕೊಡುಗೆ ನೀಡಿರುವ ಕೊಡುಗೆ ಅಪಾರ. ಅವರು ಸ್ವತಂತ್ರವಾಗಿ ಸುಮಾರು 3,900ಕ್ಕೂ ಹೆಚ್ಚು ಗಣಿತದ ಫಲಿತಾಂಶಗಳು, ಪ್ರಮೇಯಗಳು ಮತ್ತು ಸಮೀಕರಣಗಳನ್ನು ರೂಪಿಸಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು. ನಗರದ ಖಾದ್ರಿ ಚೌಕದಲ್ಲಿನ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಶ್ರೀನಿವಾಸ ರಾಮಾನುಜನ್ ಅವರ 106ನೇ ಸ್ಮರಣೋತ್ಸವ’ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಂಖ್ಯಾ ವಿಭಜನೆ, ರಾಮಾನುಜನ್-ಹಾರ್ಡಿ ಸಂಖ್ಯೆ (1729), ಅನಂತ ಸರಣಿಗಳು, ಮುಂದುವರಿದ ಭಿನ್ನರಾಶಿಗಳು, ಮಾಕ್ ಥೀಟಾ ಕಾರ್ಯಗಳು, ಡೈವಜೆರ್ಂಟ್ ಸರಣಿಗಳಿಗೆ ಸಂಬಂಧಿಸಿದಂತೆ ರಾಮಾನುಜನ್ ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ರುಕ್ಸಾನಾ ಪಟೇಲ್ ಹಾಗೂ ವಿದ್ಯಾರ್ಥಿಗಳು ಇದ್ದರು.




















