Home ಜಿಲ್ಲೆ ದೇಶಸೇವೆಯೇ ಈಶಸೇವೆ

ದೇಶಸೇವೆಯೇ ಈಶಸೇವೆ


ಕುಂದಗೋಳ,ಮೇ.೧೨:
ಮಳೆ, ಬಿಸಿಲು, ಗಾಳಿ, ಚಳಿಯನ್ನು ಲೆಕ್ಕಿಸದೇ ಹಗಲಿರುಳು ದೇಶದ ಗಡಿಯನ್ನು ಕಾಯುತ್ತಾ ಭಾರತಮಾತೆಯ ಸೇವೆ ಸಲ್ಲಿಸುವ ಸೈನಿಕರ ತ್ಯಾಗ ಮತ್ತು ಸೇವೆ ಅತ್ಯಂತ ಅಮೂಲ್ಯವಾದುದು ಎಂದು ಕುಂದಗೋಳ ಕಲ್ಯಾಣಪುರಮಠದ ಅಭಿನವ ಬಸವಣ್ಣಜ್ಜನವರು ಹೇಳಿದರು.


ತಾಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ಅಶ್ವಮೇಧ ಗೆಳೆಯರ ಬಳಗ ಹಾಗೂ ಸರ್ವೋದಯ ಮಹಿಳಾ ಗ್ರಾಮ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿವೃತ್ತ ಯೋಧ ಹನುಮಂತಪ್ಪ ರೊಟ್ಟಿಗವಾಡರ ಸನ್ಮಾನ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಚಿಕ್ಕನರ್ತಿ ಗ್ರಾಮದ ಹನುಮಂತಪ್ಪ ರೊಟ್ಟಿಗವಾಡ ಅವರು ದೇಶಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಮರಳಿರುವುದು ಗ್ರಾಮಕ್ಕೆ ಹೆಮ್ಮೆಯ ಸಂಗತಿ. ದೇಶ ಸೇವೆಯೇ ಈಶ ಸೇವೆ ಎಂಬ ಭಾವನೆಯಿಂದ ಪ್ರಾಣದ ಹಂಗು ತೊರೆದು ಗಡಿ ಕಾಯುವ ಸೈನಿಕರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಶ್ರೀಗಳು ಹೇಳಿದರು.


ಚನ್ನವೀರಯ್ಯ ಮಠದ, ಅಪ್ಪಣ್ಣ ನದಾಫ್, ಗುರುಪಾದ ಸ್ವಾದಿ, ಸಂಜೀವ ಸೋಮರೆಡ್ಡಿ, ಅಣ್ಣಪ್ಪ ದೇವನೂರು, ಬಸವರಾಜ ಅರಳಿಕಟ್ಟಿ, ರವಿ ಮುಳೊಳ್ಳಿ, ಪ್ರಕಾಶ್ ಬಿಳೇಬಾಳ, ಅಣ್ಣಪ್ಪ ಬಿಳೇಬಾಳ, ಬಸವರಾಜ್ ಪಾಟೀಲ್, ಚಂದ್ರು ಶಾನವಾಡ, ಮುತ್ತಪ್ಪ ದೊಡ್ಡಮನಿ, ಮುದುಕಪ್ಪ ಮುಸುಂಡಿ, ಅಣ್ಣಪ್ಪ ದೂಳನವರ, ಯಲ್ಲಪ್ಪ ಅಡರಕಟ್ಟಿ, ಈರಣ್ಣ ಶಾನವಾಡ, ಲಕ್ಷ÷್ಮಣ ರೊಟ್ಟಿಗವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.