Home ಜಿಲ್ಲೆ ಆಹಾರ ನಿರೀಕ್ಷಕರ ವಿರುದ್ಧ ಗಂಭೀರ ಅವ್ಯವಹಾರ ಆರೋಪ; ಉನ್ನತ ಮಟ್ಟದ ತನಿಖೆಗೆ ನಮ್ಮ ಕರ್ನಾಟಕ ಸೇನೆ...

ಆಹಾರ ನಿರೀಕ್ಷಕರ ವಿರುದ್ಧ ಗಂಭೀರ ಅವ್ಯವಹಾರ ಆರೋಪ; ಉನ್ನತ ಮಟ್ಟದ ತನಿಖೆಗೆ ನಮ್ಮ ಕರ್ನಾಟಕ ಸೇನೆ ಆಗ್ರಹ

ಯಾದಗಿರಿ:ಜು.೨೧: ಆಹಾರ ಇಲಾಖೆ ನಿರೀಕ್ಷಕ ವಿಠಲ್ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಹಾಗೂ ಅಕ್ರಮ ಆಸ್ತಿ ಗಳಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಹೊರಿಸಿರುವ ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕ, ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ತಕ್ಷಣ ಅಮಾನತುಗೊಳಿಸಬೇಕೆಂದು ಆಗ್ರಹಿಸಿದೆ.
ಈ ಸಂಬAಧ ಜಿಲ್ಲಾಧಿಕಾರಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಿಗೆ ಪ್ರತ್ಯೇಕ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ, ಆಹಾರ ನಿರೀಕ್ಷಕ ವಿಠಲ್ ಅವರು ಪಡಿತರ ಕಾರ್ಡ್ ತಿದ್ದುಪಡಿ ಮತ್ತು ಹೊಸ ಕಾರ್ಡ್ ನೀಡುವ ಹೆಸರಿನಲ್ಲಿ ಫಲಾನುಭವಿಗಳಿಂದ ?೧೫ ಸಾವಿರದಿಂದ ?೨೦ ಸಾವಿರವರೆಗೆ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ ಎಂದು ಹೇಳಿದರು. ಈ ಅಕ್ರಮದಲ್ಲಿ ಇಲಾಖೆಯ ಸಿಬ್ಬಂದಿ ಲಕ್ಷ್ಮಣ ಕೂಡ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳು ಹಂಚಿಕೆ ಆಗುವ ಅಕ್ಕಿಯಲ್ಲಿ ಎರಡು ಕ್ವಿಂಟಲ್‌ವರೆಗೆ ಕಡಿತಗೊಳಿಸಿ ವಿತರಿಸಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದಾಗ ಮೇಲಾಧಿಕಾರಿಗಳಿಗೆ ಹಣ ನೀಡಬೇಕಾಗುತ್ತದೆ ಎಂಬ ನೆಪ ಹೇಳಲಾಗುತ್ತಿದೆ ಎಂದು ದೂರಿದರು.
ಕೆಲವು ಅನಕ್ಷರಸ್ಥ ನ್ಯಾಯಬೆಲೆ ಅಂಗಡಿ ಡೀಲರ್‌ಗಳಿಗೆ ತಿಳಿಯದಂತೆ ಹೆಚ್ಚುವರಿ ಬಿಲ್ ಸೃಷ್ಟಿಸಿ, ಆಹಾರ ಧಾನ್ಯ ವಿತರಿಸದೇ ಗೋದಾಮಿನಿಂದಲೇ ಕಾಳಸಂತೆಗೆ ಮಾರಾಟ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಗೋದಾಮು ವ್ಯವಸ್ಥಾಪಕರೂ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದರು.
ವಿಠಲ್ ಅವರು ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನ್ಯಾಯಬೆಲೆ ಅಂಗಡಿ ಡೀಲರ್‌ಗಳಿಂದ ಪ್ರತಿ ತಿಂಗಳು ?೫ ಸಾವಿರ ಹಣ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಹಣ ನೀಡದಿದ್ದರೆ ಅಂಗಡಿ ಅಮಾನತುಗೊಳಿಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ಹಲವಾರು ಡೀಲರ್‌ಗಳು ತಮ್ಮ ಬಳಿ ದೂರು ನೀಡಿದ್ದಾರೆ ಎಂದು ವಿಶ್ವಾರಾಧ್ಯ ದಿಮ್ಮೆ ತಿಳಿಸಿದರು.
ಇದಲ್ಲದೆ, ಡೀಲರ್‌ಗಳಿಗೆ ಹೆಚ್ಚುವರಿ ನ್ಯಾಯಬೆಲೆ ಅಂಗಡಿಗಳ ಜವಾಬ್ದಾರಿ ನೀಡುವ ಮೂಲಕ ಅದರ ಆದಾಯದಲ್ಲಿ ಪಾಲು ಪಡೆಯಲಾಗುತ್ತಿದೆ. ಸಂಬAಧಿಕರ ಹೆಸರಿನಲ್ಲಿ ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದಿಸಿರುವ ಅನುಮಾನವೂ ಇದೆ ಎಂದು ಆರೋಪಿಸಿದರು.
ಮದ್ಯಪಾನದ ಅಮಲಿನಲ್ಲಿ ರಾತ್ರಿ ವೇಳೆ ಡೀಲರ್‌ಗಳಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಕರೆ ಸ್ವೀಕರಿಸದಿದ್ದರೆ ಅಮಾನತು ಮಾಡುವುದಾಗಿ ಬೆದರಿಕೆ ಹಾಕುವುದು ಸೇರಿದಂತೆ ಹಲವು ರೀತಿಯ ಅಧಿಕಾರ ದುರ್ಬಳಕೆ ನಡೆಯುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಹೀಗಾಗಿ ವಿಠಲ್ ಅವರ ನೇಮಕಾತಿಯಿಂದ ಇದುವರೆಗಿನ ಸೇವಾ ಅವಧಿಯ ಸಂಪೂರ್ಣ ಆಸ್ತಿ ವಿವರ ಪರಿಶೀಲಿಸಿ, ಉನ್ನತ ಮಟ್ಟದ ತನಿಖೆ ನಡೆಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಅಮಾನತುಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮು ಪೂಜಾರಿ, ಮಹಿಳಾ ಜಿಲ್ಲಾ ಅಧ್ಯಕ್ಷೆ ಶ್ರೀದೇವಿ ಕಟ್ಟಿಮನಿ, ಗುರುಮಠಕಲ್ ತಾಲೂಕು ಅಧ್ಯಕ್ಷ ಅಬ್ದುಲ್ ರಿಯಾಜ್, ಮರೆಪ್ಪ, ರಮೇಶ್ ಬೈರಂಕೊAಡ, ಭೀಮು ಮಳ್ಳಳ್ಳಿ, ರೆಡ್ಡೆಪ್ಪ ಬಡ್ಡಿ, ಅಬ್ದುಲ್ ಅಜೀಜ್, ಮೆಹಬೂಬ್, ಶರಣು ಅರ್ಜುಣಗಿ, ಸಿದ್ದು ಬಾಡದ್, ಕಾಶಿಂ ಗೊರ್ಲೆ, ಸಂತೋಷ್, ಸಾಬಣ್ಣ, ಶರೀಫ್, ವೆಂಕಟೇಶ್ ಚಿಕ್ಕಬಾನರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.