
ಜೇವರ್ಗಿ, ಏ.೧೪- ನಿಸ್ವಾರ್ಥ ಸೇವೆಯನ್ನು ಮಾಡುವುದೇ ಎನ್.ಎಸ್.ಎಸ್, ನ ಮುಖ್ಯ ಉದ್ದೇಶವೆಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಂತಾ ಬಿ ಅಷ್ಟಿಗೆ ಅವರು ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜೇವರ್ಗಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಅವರ ಸಯೋಗದಲ್ಲಿ ಆಯೋಜಿಸಿದ ೨೦೨೫ – ೨೬ನೇ ಶೈಕ್ಷಣಿಕ ಸಾಲಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಬಿರಾರ್ಥಿಗಳು ಶ್ರಮದಾನ ಮಾಡುವುದರ ಮುಖಾಂತರ ನಿಸ್ವಾರ್ಥವಾಗಿ ಸೇವೆ ಮಾಡಬೇಕೆಂದು ಕರೆ ನೀಡಿದರು.
ನಿಸ್ವಾರ್ಥ ಸೇವೆ ಮಾಡುವುದೇ ಎನ್.ಎಸ್.ಎಸ್ ನ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಶ್ರೀಮತಿ ಸುಜಾತಾ ಪಾಟೀಲ್. ಶ್ರೀಮತಿ ಸಾವಿತ್ರಿ ಮೇಲಿನಕೇರಿ ಡಾ. ಖಾಜಾವಲಿ ಈಚನಾಳ್ ಮಾತನಾಡಿದರು ಶಿಬಿರಾರ್ಥಿಗಳು ಒಂದು ವಾರಗಳ ಕಾಲ ನಡೆದ ಎಲ್ಲಾ ಚಟುವಟಿಕೆಗಳ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.
ಬಸವರಾಜಪ್ಪ ಗೌಡ ಪಾಟೀಲ್ ಮುಖಂಡರು ಕೆಲ್ಲೂರು ಗ್ರಾಮ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಜೇತ ತಂಡದ ಶಿಬಿರಾರ್ಥಿಗಳಿಗೆ ಬಹುಮಾನಗಳನ್ನು ಕೂಡ ವಿತರಿಸಲಾಯಿತು. ಕಸದಿಂದ ರಸ ಎನ್ನುವ ಹಾಗೆ ಎನ್.ಎಸ್.ಎಸ್ ಶಿಬಿರಾರ್ಥಿಗಳು ಶಿಬಿರದಲ್ಲಿ ಬಹಳ ಆಸಕ್ತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಡಾ. ಶರಣಪ್ಪ ಗುಂಡಗುರ್ತಿ ಶ್ರೀ. ಕುಪೇಂದ್ರ ಕುಮಾರಿ ಅಪರ್ಣ ಹಾಜರಿದ್ದರು ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೆತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು, ಕುಮಾರ ವಿಶ್ವನಾಥ್ ನಿರೂಪಿಸಿದರು. ಡಾ. ಶರಣಪ್ಪ ಗುಂಡಗುರ್ತಿ ಸ್ವಾಗತ ಮಾಡಿದರು. ಡಾ.ರಾಮುಲು ಎಲ್ಲರನ್ನು ವಂದಿಸಿದರು.






















