
ಕಲಬುರಗಿ:ಏ.13:ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷಕ್ಕಾಗಿ ಪ್ರವೇಶ ಬಯಸುವ ಹತ್ತನೇ ತರಗತಿಯ ಕರ್ನಾಟಕ ಸ್ಟೇಟ್ ಬೋರ್ಡನ ಕನ್ನಡ ಮತ್ತು ಇಂಗ್ಲೀಷ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂದು ದಿ. 12-04-2026 ರಂದು ಮದ್ಯಾಹ್ನ. 3:00 ರಿಂದ 5:00 ಗಂಟೆಯವರೆಗೆ ಪ್ರವೇಶ ಪರೀಕ್ಷೆ ನಡೆಯಿತು. ಈ ಪರೀಕ್ಷೆಯಲ್ಲಿ ಬೀದರ, ಭಾಲ್ಕಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಗದಗ, ಬೆಳಗಾವಿ, ವಿಜಯಪೂರ ಸೇರಿದಂತೆ ಅನೇಕ ಜಿಲ್ಲೆಗಳಿಂದ ಹಾಗೂ ಗಡಿರಾಜ್ಯಗಳಾದ ಮಹಾರಾಷ್ಟ್ರ, ಆಂದ್ರಪ್ರದೇಶ ತೆಲಂಗಾಣ ವಿವಿಧ ಪ್ರದೇಶಗಳಿಂದ 4798 ವಿದ್ಯಾರ್ಥಿಗಳು ಹಾಜರಿದ್ದು ಪರೀಕ್ಷೆ ಬರೆದರು.
ಈ ಪರೀಕ್ಷೆಯಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾಭಂಡಾರಿ ಪರಮಪೂಜ್ಯ ಲಿಂಗೈಕ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಆಶಯದಂತೆ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಹೆಸರಲ್ಲಿ ಸ್ಕಾಲರ್‍ಶಿಪ್ ರೂಪದಲ್ಲಿ 5 ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ.
ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ಎಸ್.ಬಿ.ಆರ್. ಪಿ.ಯು ಕಾಲೇಜು, ಮುಕ್ತಾಂಬಿಕಾ ಪಿ.ಯು ಕಾಲೇಜು, ಅಪ್ಪಾ ಪಬ್ಲಿಕ್ ಶಾಲೆ, ಎಸ್.ಬಿ.ಆರ್ ಪಬ್ಲಿಕ್ ಶಾಲೆ, ದೊಡ್ಡಪ್ಪ ಅಪ್ಪಾ ಪಿಯು ಕಾಲೇಜು ಹೀಗೆ ಸಂಸ್ಥೆಯ 6 ಶಾಲಾ ಕಾಲೇಜುಗಳಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿನ ವಾತಾವರಣದಲ್ಲಿ ಯಾವುದೇ ಅನಾನುಕೂಲವಾಗದಂತೆ ಸಾವಿರಾರು ವಿದ್ಯಾರ್ಥಿಗಳು ಶಾಂತತೆಯಿಂದ ಪರೀಕ್ಷೆ ಬರೆದರು.
10ನೇ ತರಗತಿಯ ವಿಜ್ಞಾನ ಮತ್ತು ಗಣಿತ ವಿಷಯಗಳÀನ್ನು ಆಧಾರವಾಗಿಟ್ಟುಕೊಂಡು
100 ಪ್ರಶ್ನೆಗಳ, 400 ಅಂಕಗಳ -ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲಾಗಿತ್ತು. 16 ವರ್ಷನ್‍ಗಳಿಂದ ಕೂಡಿದ ಪ್ರಶ್ನೆ ಪತ್ರಿಕೆಯು ಋಣಾತ್ಮಕ ಅಂಕಗಳನ್ನು ಒಳಗೊಂಡಿತ್ತು. ಅತ್ಯಂತ ಪಾರದರ್ಶಕವಾಗಿ ಪ್ರವೇಶ ಪರೀಕ್ಷೆ ನಡೆಸಲಾಯಿತು. ಇದು ಎಸ್.ಬಿ.ಆರ್ ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಮತ್ತು ಗುರು-ವೃಂದದವರ ಪರಿಶ್ರಮಕ್ಕೆ ಹಿಡಿದ ಕನ್ನಡಿಯಾಗಿದೆ.
ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಲಹೆ-ಸಹಕಾರ ಹಾಗೂ ಮಾರ್ಗದರ್ಶನಕ್ಕಾಗಿ ಕ್ಯಾಂಪಸ್‍ನಲ್ಲಿ ಹೆಲ್ಪ-ಡೆಸ್ಕ ವ್ಯವಸ್ಥೆ ಮಾಡಲಾಗಿತ್ತು. ಆನ್-ಲೈನ್ ರೆಜಿಸ್ಟ್ರೇಶನ್ ಮಾಡಿಸದೇ ಹಾಗೆಯೇ ಬಂದ ವಿದ್ಯಾರ್ಥಿಗಳಿಗೆ ಸ್ಪಾಟ್ ರೆಜಿಸ್ಟ್ರೇಶನ್ ಮಾಡಿಸಿ, ಯಾವುದೇ ವಿದ್ಯಾರ್ಥಿಯೂ ಕೂಡಾ ಮರಳಿ ಹೋಗದಂತೆ ಅವರಿಗೆ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿತು ಎಂದು ಕಾಲೇಜಿನ ಪ್ರಾಚಾರ್ಯರಾದ ಶ್ರೀ. ಎನ್.ಎಸ್. ದೇವರಕಲ್ ಸರ್ ಅವರು ತಿಳಿಸಿದ್ದಾರೆ.






















