
ಬೀದರ್ : ಏ.27:ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಯು.ಎಸ್ ಸಂರ್ಷದ ಹಿನ್ನೆಲೆ ಜಗತ್ತಿನಾದ್ಯಂತ ಉಂಟಾಗಿರುವ ಅಶಾಂತಿ ಕೊನೆಗೊಳ್ಳಬೇಕು ಎಂಬ ಆಶಯದೊಂದಿಗೆ ಬೀದರ್ ಜಿಲ್ಲೆಯ ಎಲ್ಲಾ ರೋಟರಿ ಕ್ಲಬ್‍ಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಶಾಂತಿ ನಡಿಗೆ ಹಮ್ಮಿಕೊಳ್ಳಲಾಯಿತು. ರೋಟರಿ ಪೇಲ್ಸ್ & ಸೇಲ್ಸ್ ಕರ್ಯಕ್ರಮದ ಅಧ್ಯಕ್ಷ ಬಸವರಾಜ ಧನ್ನೂರ ಹಾಗೂ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ಅಧ್ಯಕ್ಷ ಆದಿಶ್ ವಾಲಿ ಅವರ ನೇತೃತ್ವದಲ್ಲಿ ನಗರದ ಬರೀದ ಶಾಯಿ ಗರ್ಡನ್‍ನಿಂದ ಪ್ರಾರಂಭವಾದ ಈ ನಡಿಗೆ ನೂತನ ಬಸ್ ನಿಲ್ದಾಣ, ಮಡಿವಾಳ ಮಾಚಿದೇವ ವೃತ್ತದ ಮೂಲಕ ಸಾಗುತ್ತಾ ರೋಟರಿ ಕನ್ನಡಾಂಬೆ ವೃತ್ತದಲ್ಲಿ ಸಮಾಪ್ತಿಯಾಯಿತು.
ಈ ವೇಳೆ ಮಾತನಾಡಿದ ರೋಟರಿ ಕಲ್ಯಾಣ ವಲಯ ಡಿಸ್ಟ್ರಿಕ್ಟ್ ಗರ್ನರ್ ಎಂ.ಕೆ. ರವೀಂದ್ರ ಅವರು, ವಿಶ್ವದಲ್ಲಿ ಶಾಂತಿ ಸ್ಥಾಪನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಯುದ್ಧಗಳು ಮಾನವಕುಲಕ್ಕೆ ಅಪಾಯಕಾರಿಯಾಗಿದ್ದು, ಸಹಬಾಳ್ವೆಯ ಮೂಲಕವೇ ಶಾಂತಿ ಸಾಧ್ಯವೆಂದು ತಿಳಿಸಿದರು. ರೋಟರಿ ಕಲ್ಯಾಣ ವಲಯ ಡಿಸ್ಟ್ರಿಕ್ಟ್ ಗರ್ನರ್ ಕೇಶವ ರೆಡ್ಡಿ ಅವರು ಮಾತನಾಡಿ, ಯುದ್ಧದಿಂದ ವಿನಾಶವೇ ಹೊರತು ಯಾರಿಗೂ ಲಾಭವಿಲ್ಲ. ರ್ಮ, ಜಾತಿ ಬೇಧ ಮೀರಿದ ಮಾನವೀಯತೆ ಬೆಳೆಸಿದಾಗ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲಿದೆ ಎಂದು ಹೇಳಿದರು.
ಹಿರಿಯ ಪತ್ರರ್ತ ಶಿವಶರಣಪ್ಪ ವಾಲಿ ಮಾತನಾಡಿ, ಯುದ್ಧದ ದುಷ್ಪರಿಣಾಮಗಳು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ವಿಶೇಷವಾಗಿ ಸಣ್ಣ ಪುಟ್ಟ ದೇಶಗಳು ಹೆಚ್ಚು ಸಂಕಷ್ಟ ಅನುಭವಿಸುತ್ತಾರೆ. ಆದ್ದರಿಂದ ಶಾಂತಿ ಮತ್ತು ಸೌಹರ್ದತೆ ಉಳಿಸುವುದು ಅತ್ಯಂತ ಅಗತ್ಯವೆಂದರು.
ರೋಟರಿ ಮಾಜಿ ಡಿಸ್ಟ್ರಿಕ್ಟ್ ಗರ್ನರ್ ರವಿ ವಾದ್ರಾಮಾನಿ ಮಾತನಾಡಿ, ಯುದ್ಧಗಳಿಂದ ಅಮಾಯಕರ ಜೀವಹಾನಿಯಾಗುತ್ತದೆ. ರ್ಥಿಕ ಸಂಕಷ್ಟ ಹಾಗೂ ಮಾನವೀಯ ಮೌಲ್ಯಗಳ ಹಾನಿ ಸಂಭವಿಸುತ್ತದೆ. ಶಾಂತಿಯೇ ಅಭಿವೃದ್ಧಿಗೆ ಮೂಲವಾಗಿದ್ದು, ಅದನ್ನು ಕಾಪಾಡುವುದು ಎಲ್ಲರ ರ್ತವ್ಯವೆಂದರು.
ರೊಟೋರಿಯನ್ ಬಸವರಾಜ ಧನ್ನೂರ ಮಾತನಾಡಿ, ಒಂಬತ್ತು ಶತಮಾನಗಳ ಹಿಂದೆ ಬಸವಣ್ಣನವರು ಯಾವುದೇ ಯುದ್ಧ ಬೇಡ ಎಂದು ಹೇಳಿ ಪ್ರತಿಯೊಂದು ಪ್ರಾಣಿ, ಪಕ್ಷಿ, ಜೀವಸಂಕುಲದ ಮೇಲೆ ದಯೆ ಇರಬೇಕು ಎಂದು ಹೇಳಿದ್ದರು. ಆದರೆ ಇವತ್ತು ಜಗತ್ತಿನಲ್ಲಿ ಎರಡು ದೇಶಗಳಲ್ಲಿ ನಡೆಯುತ್ತಿರುವ ಈ ಯುದ್ಧ ಜಗತ್ತಿನ ಸಾಕಷ್ಟು ಅಮಾಯಕರ ಮೇಲೆ ಪ್ರಭಾವ ಬೀರುತ್ತವೆ ಆದ್ದರಿಂದ ಈ ಬಸವಣ್ಣನ ನೆಲದಿಂದ ಜಗತ್ತಿಗೆ ಶಾಂತಿಯ ಸಂದೇಶವನ್ನು ನೀಡಬೇಕು ಎಂಬ ಉದ್ದೇಶದಿಂದ ಇಂದು ನಗರದಲ್ಲಿ ವಿಶ್ವಶಾಂತಿಗಾಗಿ ಶಾಂತಿಯುತ ನಡಿಗೆಯನ್ನು ಹಮ್ಮಿಕೊಳ್ಳಲಾಯಿತು ಎಂದು.
ಈ ಶಾಂತಿ ನಡಿಗೆಯಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ರೋಟರಿ ಅಸಿಸ್ಟೆಂಟ್ ಗರ್ನರ್ ಹಾವಶೆಟ್ಟಿ ಪಾಟೀಲ್, ನಿತೀನ್ ರ್ಪೂರ, ಬೀದರ್ ಜಿಲ್ಲೆಯ ಎಲ್ಲ ರೋಟರಿ ಕ್ಲಬ್ ಅಧ್ಯಕ್ಷರು, ಕರ್ಯರ್ಶಿಗಳು, ಪದಾಧಿಕಾರಿಗಳು, ಸದಸ್ಯರು, ಶಾಹೀನ್ ಶಿಕ್ಷಣ ಸಂಸ್ಥೆಯ ಹಾಗೂ ಸೈನಿಕ ಶಾಲೆಯ ವಿದ್ಯರ್ಥಿಗಳು ಸೇರಿದಂತೆ ಅನೇಕರು ಭಾಗವಹಿಸಿ ಶಾಂತಿ ಸಂದೇಶ ಸಾರಿದರು.




















