
ಕಲಬುರಗಿ,ಮೇ 21: ಕಲಬುರಗಿ ವಿಮಾನ ನಿಲ್ದಾಣದಿಂದ ಜೂನ್ 10 ರಿಂದಬೆಂಗಳೂರಿಗೆ ವಿಮಾನ ಸೇವೆ ಪುನರಾರಂಭವಾಗಲಿದೆ.ಈ ಹಿನ್ನೆಲೆಯಲ್ಲಿ ಸ್ಟಾರ್ ಏರ್‍ವೇಸ್ ಪ್ರಾಂತೀಯ ದಕ್ಷಿಣಭಾರತ ಮುಖ್ಯಸ್ಥ ಸೋಹೇಲ್ ಅಹ್ಮದ್ ಅವರು ಕೆ.ಕೆ.ಸಿ.ಸಿಐ ಕಚೇರಿಗೆ ಭೇಟಿ ನೀಡಿ ವಿಷಯ ಹಂಚಿಕೊಂಡರು.
ಶೀಘ್ರದಲ್ಲೇ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯೂ ಆರಂಭವಾಗಲಿದೆ ಎಂದು ಮಾಹಿತಿನೀಡಿದರು.ವಿಮಾನ ಬೆಂಗಳೂರಿನಿಂದ ಸಾಯಂಕಾಲ 6 ಗಂಟೆಗೆ ಹೊರಟು ಕಲಬುರಗಿಗೆ ಸಾಯಂಕಾಲ 7.10 ಗಂಟೆಗೆತಲುಪಿ ಪುನಃ ಸಾಯಂಕಾಲ 7.40ಕ್ಕೆ ಕಲಬುರಗಿಯಿಂದ ಹೊರಟು ಬೆಂಗಳೂರಿಗೆ ರಾತ್ರಿ 8.50 ಗಂಟೆಗೆ ತಲುಪಲಿದೆ.
ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಸೇವೆಗಳು ಸ್ಥಗಿತಗೊಂಡ ನಂತರ ಕಳೆದ ಹಲವು ತಿಂಗಳುಗಳಿಂದ
ಕೆಕೆಸಿಸಿಐ ವತಿಯಿಂದ ಕೇಂದ್ರ ನಾಗರಿಕ ವಿಮಾನಯಾನ ಸಚಿವರು, ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರನ್ನು
ನಿರಂತರವಾಗಿ ಭೇಟಿ ಮಾಡಿ ಕಲಬುರಗಿ ವಿಮಾನ ಸೇವೆಗಳನ್ನು ಶೀಘ್ರ ಪುನರಾರಂಭಿಸುವಂತೆ ಒತ್ತಾಯಿಸಲಾಗುತ್ತಿತ್ತು.ಜೊತೆಗೆ ಕಲಬುರಗಿ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದ ಉಡಾನ್2.0 ಯೋಜನೆಯಡಿ ಸೇರಿಸಿ ಬೆಂಗಳೂರುಸೇರಿದಂತೆ ದೇಶದ ಇತರೆ ಪ್ರಮುಖ ನಗರಗಳಿಗೆ ಹೆಚ್ಚಿನ ವಿಮಾನ ಸಂಪರ್ಕ ಕಲ್ಪಿಸುವಂತೆ ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗಿತ್ತು. ಈ ಸಂದರ್ಭದಲ್ಲಿ ಕೆ.ಕೆ.ಸಿ.ಸಿ.ಐ ವತಿಯಿಂದ ಸೋಹೇಲ್ ಅಹ್ಮದ್ ಅವರಿಗೆ ಸನ್ಮಾನಿಸಲಾಯಿತು. ಕಲಬುರಗಿಯಿಂದ ದೆಹಲಿ, ತಿರುಪತಿ ಹಾಗೂ ಇತರೆ ಪ್ರಮುಖ ನಗರಗಳಿಗೆ ವಿಮಾನ ಸೇವೆ ಒದಗಿಸುವಂತೆ ಮನವಿ ಮಾಡಲಾಯಿತು. ಕೇಂದ್ರ ಸರ್ಕಾರದ ಉಡಾನ್-02 ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ವಿಮಾನ ಸೇವೆಗಳು ದೊರೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೆ.ಕೆ.ಸಿ.ಸಿ.ಐಆಗ್ರಹಿಸಿತು.
ಈ ಸಂದರ್ಭದಲ್ಲಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ, ಪದಾಧಿಕಾರಿಗಳಾದ ಶಿವರಾಜ ಇಂಗಿನಶೆಟ್ಟಿ, ಗಿರೀಶ ಅಣಕಲ್,ಉತ್ತಮ ಬಜಾಜ್, ಆಡಳಿತ ಮಂಡಳಿಯ ಸದಸ್ಯರಾದ ಆನಂದ ಹೋಳಕುಂದಿ,ಜಗದೀಶ ಪಾಟೀಲ್‍ಉಪಸ್ಥಿತರಿದ್ದರು.





















