
ಮುದ್ದೇಬಿಹಾಳ :ಮಾ.2:ಪಟ್ಟಣ ದಲ್ಲಿ ರವಿವಾರದಂದು ಜಂಗಮ ಸಮಾಜದ ಮುಖಂಡರು ಸೇರಿಕೊಂಡು ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ವೃತ್ತಿಪರ ವಕೀಲರಾದ ಶ್ರೀ ವಿಜಯ್ ಮಹಾಂತೇಶ್ ಸಾಲಿಮಠ ಅವರು ಮಾತನಾಡಿ,
ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಒಬ್ಬರು. ಇವರ ತತ್ವ, ಬದುಕಿನ ಚರಿತ್ರೆ, ಮತ್ತು ಧಾರ್ಮಿಕ ಸಾಧನೆಗಳು ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಪಡೆದಿವೆ. ಕನ್ನಡ ಭಾಷೆಯಲ್ಲಿ ಇವರ ಬದುಕು ಮತ್ತು ತತ್ವಗಳನ್ನು ವಿವರಿಸುವ ಹಲವು ಪುರಾಣಗಳು ಮತ್ತು ಗ್ರಂಥಗಳಿವೆ.
ಹುಟ್ಟಿದ್ದು: ಇವರು ಆಂಧ್ರ ಪ್ರದೇಶದ ಕದ್ರಿಕಿ ಎಂಬ ಸ್ಥಳದಲ್ಲಿ ಹುಟ್ಟಿದರೆಂದು ನಂಬಲಾಗಿದೆ. ಕೆಲವೊಂದು ಕಾದಂಬರಿಗಳು ಇವರನ್ನು ಪರಮಶಿವನ ಅವತಾರ ಎಂದು ಗುರುತಿಸುತ್ತವೆ. ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರಾಗಿ ಪ್ರಬಾರ ವಹಿಸಿದ ಪ್ರಯುಕ್ತ ಹಡಲಗೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಎಸ್ ಎಸ್ ಗಣಾಚಾರಿ ಅವರಿಗೆ ಗೌರವ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಕೀರ್ತಿ ಚಾಲಕ, ಜಂಗಮ ಸಮಾಜದ ಅಧ್ಯಕ್ಷರು ದಾನಯ್ಯಸ್ವಾಮಿ ಹಿರೇಮಠ, ಅಕ್ಷರ ದಾಸೋಹ ನಿರ್ದೇಶಕರು ಎಂ ಎಂ ಬೆಳಗಲ್ಲ, ಸಮಾಜದ ಮುಖಂಡರು ಆದ ಕೆ. ಪಿ. ಹಿರೇಮಠ, ಎ, ಸಿ, ಹಿರೇಮಠ,ಮಹಾಂತೇಶ ಬೂದಿಹಾಳಮಠ,ಆನಂದ್ ಹಿರೇಮಠ, ಶ್ರೀಕಾಂತ್ ಹಿರೇಮಠ, ಶಿವಾನಂದ ಹಿರೇಮಠ, ಗೌರಿಶಂಕರ ಪುರಾಣಿಕಮಠ, ಮಲ್ಲು, ಶರಣು ಹಿರೇಮಠ, ಗೌರಮ್ಮ, ಎಲ್ಲ ಮುಖಂಡರುಗಳು ಉಪಸ್ಥಿತರಿದ್ದರು.






















