Home ಜಿಲ್ಲೆ ನೀರು ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

ನೀರು ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ


ಬಂಕಾಪುರ,ಮೇ.೧೨: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ್ ಪಟ್ಟಣದಲ್ಲಿ ನೀರಿಗಾಗಿ ಸ್ಥಳೀಯ ಮಹಿಳೆಯರು ಖಾಲಿ ಬಿಂದಿಗೆ ಹಿಡಿದುಕೊಂಡು ಪುರಸಭೆ ಎದಿರು ಪ್ರತಿಭಟನೆ ನಡೆಸಿದರು. ಪುರಸಭೆಯವರು ಒಂದು ತಿಂಗಳಿAದ . ಸರಿಯಾಗಿ ನೀರನ್ನು ಪೋರಿಸಿಲ್ಲ ಎಂದು ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ೬ನೇ ವಾರ್ಡಿನಲ್ಲಿ ಯಾವುದೇ ನೀರಿನ ಟ್ಯಾಂಕ್,ಬೋರ್ವೆಲ್ ವ್ಯವಸ್ಥೆ ಇಲ್ಲ ಒಂದು ತಿಂಗಳಿAದ ನೀರು ಬಿಟ್ಟಿರುವುದಿಲ್ಲ. ಸ್ಥಿತಿ ವಂತರು ದುಡ್ಡು ಕೊಟ್ಟು ನೀರು ಹಾಕಿಸಿಕೊಳ್ಳುತ್ತಾರೆ. ಕೂಲಿ ನಾಲಿ ಮಾಡಿ ಬದುಕುವ ಬಡವರು ನೀರಿಗಾಗಿ ಎಲ್ಲಿಂದ ಹಣ ತರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ೬ನೇ ವಾರ್ಡಿನ ಪುರಸಭೆ ಸದಸ್ಯ ರಮೇಶ್ ಸಿದ್ಧನವರ್ ಮಾತನಾಡಿ ನಮ್ಮ ವಾರ್ಡಿಗೆ ಸರಿಯಾಗಿ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ದಾರಿ ಹಿಡಿಯಬೇಕಾಗುತ್ತದೆ ಎಂದರು.

ಪುರಸಭೆ ಅಧಿಕಾರಿ ಬಿ.ಎಸ್. ಗಿಡ್ಡಣ್ಣವರ್ ಪ್ರತಿಭಟನಾಕಾರರೊಂದಿಗೆ ಮಾತನಾಡಿ ೬ನೇ ವಾರ್ಡಿಗೆ ತುಳಜಾ ಭವಾನಿ ದೇವಸ್ಥಾನದ ಹತ್ತಿರ ಹಾಗೂ ಜಾಡಗಪ್ಪದ ಓಣಿ ಒಳಗೆ ಪುರಸಭೆಯಿಂದ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲಿಯವರೆಗೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.