ಕನ್ನಡ ಉಳಿಸಿಕೊಳ್ಳುವುದು ತುರ್ತು ಅಗತ್ಯ: ನಿಸಾರಅಹ್ಮದ್

ಕಲಬುರಗಿ:ನ.1: ನ. 01 ಕನ್ನಡಿಗರ ಹಬ್ಬ, ಕನ್ನಡಾಂಬೆಯನ್ನುಆರಾಧಿಸುವ ದಿನವಾಗಿದ್ದು, ಭಾರತ ಸ್ವತಂತ್ರ ನಂತರ ಭಾಷಾವಾರು ವಿಂಗಡಣೆಯಾಗಿಕರ್ನಾಟಕದಲ್ಲಿಕನ್ನಡ ಆಡಳಿತ ಭಾಷೆಯಾಗಿ ಹೊರಹೊಮ್ಮಿತು, ಕನ್ನಡಕ್ಕೆಎಂಟುಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡ ಹಿರಿಮೆ ಹೆಮ್ಮೆ ಪಡುವಂತಹದ್ದು, ಈ ನೆಲದಲ್ಲಿ ಹುಟ್ಟಿದ ನಾವು ಪುಣ್ಯವಂತರುಎಂದುಸಮಗ್ರಅಭಿವೃದ್ಧಿ ಸಂಸ್ಥೆ ಕಛೇರಿ ಕಲಬುರಗಿಯಲ್ಲಿ ನಡೆದಕನ್ನಡರಾಜ್ಯೋತ್ಸಕಾರ್ಯಕ್ರಮದಲ್ಲಿಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾಸ್ತಾವಿಕವಾಗಿಶ್ರೀ ವಿಠಲ ಕುಂಬಾರರವರು ಮಾತನಾಡಿದರು.
ಕಲ್ಯಾಣ ನಾಡಿನಲ್ಲಿಅಂದು ನಡೆದಅಕ್ಷರದಾಸೋಹಆಂದೋಲನ: ಇದು ದೀನ-ದಲಿತರಿಗೆ, ಹೆಣ್ಣು ಮಕ್ಕಳಿಗೆ, ಅನಕ್ಷರಸ್ಥರಿಗೆ, ಶೂದ್ರರಿಗೆ, ಅಸ್ಪೃಶ್ಯರಿಗೆ ಶಿಕ್ಷಣ ಕೊಡಿಸುವ ಮಹಾನ್‍ಕಾರ್ಯವಾಗಿದೆ. ಅಲ್ಲದೇ, ಬೇರೆದೇಶ, ರಾಜ್ಯಗಳಲ್ಲಿ ಕನ್ನಡ ಭಾμÉ, ಕನ್ನಡ ಸಾಹಿತ್ಯವನ್ನು ಬಿತ್ತರಿಸುವ ಮೂಲಕ ಕನ್ನಡ ನಾಡಿನಕೀರ್ತಿ ಪತಾಕೆಯನ್ನು ಹಾರಿಸಿದವರು ಬಸವಾದಿ ಶರಣರುಎಂಬುದನ್ನು ನಾವು ಮರೆಯಬಾರದು ಹಾಗೂ ಕನ್ನಡ ಉಳಿಸಿಕೊಳ್ಳುವುದು ತುರ್ತುಅಗತ್ಯಎಂದುಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ನಿಸಾರಅಹಮದ್ ಚಿಂಚೋಳಿ ರವರು ಮಾತನಾಡಿದರು.
ಕಾರ್ಯಕ್ರಮದಲ್ಲಿಕನ್ನಡ ಕವನ ವಾಚನದ ಮೂಲಕ ಸಂಸ್ಥೆಯಉಪಾಧ್ಯಕ್ಷರಾದ ಹೆಚ್.ಎಸ್. ಬರಗಾಲಿ ಮನರಂಜಿಸಿದರು.
ಕಾರ್ಯಕ್ರಮದಲ್ಲಿ ಸಿದ್ರಾಮ ರಾಜಮಾನೆ, ರಾಜಶೇಖರ್‍ತಿಗಶೆಟ್ಟಿ ಉಪಸ್ಥಿತರಿದ್ದರು.ನಾಗರಾಜ ಬಿರಾದಾರಕಾರ್ಯಕ್ರಮ ನಿರೂಪಿಸಿದರು.ಬಸವಂತರಾಯ ಕೋಳಕೂರ ಸ್ವಾಗತಿಸಿದರು, ರಾಹುಲ್ ವಾಡಿ ವಂದಿಸಿದರು.