Home ಜಿಲ್ಲೆ ಕಲುಷಿತ ನೀರು ಪೂರೈಕೆ: ನಾಗರಿಕರ ಆಕ್ರೋಶ

ಕಲುಷಿತ ನೀರು ಪೂರೈಕೆ: ನಾಗರಿಕರ ಆಕ್ರೋಶ


ನವಲಗುಂದ,ಮೇ.೪: ಪಟ್ಟಣದ ಕೆಲವು ವಾರ್ಡ ನಿವಾಸಿಗಳಿಗೆ ಕಳೆದ ಹಲವು ದಿನಗಳಿಂದ ಕಲುಷಿತ ಹಾಗೂ ಕೆಸರು ಮಿಶ್ರಿತ ನೀರು ಪೂರೈಕೆಯಾಗುತ್ತಿದ್ದು ಪುರಸಭೆಯ ನಿರ್ಲಕ್ಷ÷್ಯವನ್ನು ಖಂಡಿಸಿ ಪಟ್ಟಣದ ಸಾರ್ವಜನಿಕರು ತಹಶೀಲ್ದಾರ ಸುಧೀರ ಸಾಹುಕಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ಈ ವೇಳೆ ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಮಾತನಾಡಿ ಸದ್ಯ ಪಟ್ಟಣದಲ್ಲಿ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಕೆಸರು ಮಿಶ್ರಿತ ನೀರು ಬರುತ್ತಿರುವುದರಿಂದ ಸಾರ್ವಜನಿಕರಲ್ಲಿ ವಾಂತಿ, ಭೇದಿಯಂತಹ ರೋಗಗಳು ಕಾಣಿಸಿಕೊಳ್ಳುವ ಆತಂಕ ಎದುರಾಗಿದೆ. ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ” ಎಂದು ಕಳವಳ ವ್ಯಕ್ತಪಡಿಸಿದರು.


ಶರಣಪ್ಪ ದೊಡ್ಡಮನಿ ಮಾತನಾಡಿ ೨೪ಘಿ೭ ನೀರು ಪೂರೈಕೆಯ ಗುತ್ತಿಗೆದಾರರು ನಾಗರಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಅಧಿಕಾರಿಗಳ ಕಣ್ಣಮುಂದೆಯೇ ಜನರು ಅನಾರೋಗ್ಯಕ್ಕೆ ಈಡಾಗುತ್ತಿದ್ದರೂ, ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ಮೌನ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಬೇಸರ ವ್ಯಕ್ತ ಪಡಿಸಿದರು..
ಕಾಶೀಮಸಾಬ ಮಿರ್ಜಿ, ಶಿವರಾಜ ಲಕ್ಕುಂಡಿ, ಬಶೀರಅಹ್ಮದ ಹುನಗುಂದ, ಮಹಮ್ಮದಲಿ ಮಿರ್ಜಿ, ಬಸವರಾಜ ಮಲ್ಲದಾಸರ, ಕುಮಾರ ಹೊನ್ನಕುದರಿ, ಉಸ್ಮಾನಸಾಬ ಮನಿಯಾರ ಇತರರು ಇದ್ದರು