Home ಜಿಲ್ಲೆ ಪೆಟ್ರೋಲ್ ಡೀಸೆಲ್ ಕೊರತೆ: ಜನರ ಆತಂಕ

ಪೆಟ್ರೋಲ್ ಡೀಸೆಲ್ ಕೊರತೆ: ಜನರ ಆತಂಕ


ಚನ್ನಮ್ಮನ ಕಿತ್ತೂರು,ಮಾ.೨೬: ತಾಲೂಕು ಸೇರಿದಂತೆ ಪಟ್ಣಣದಲ್ಲಿ ಪೇಟ್ರೋಲ್ ಪಂಪ್‌ಗಳಲ್ಲಿ ಡೀಸೆಲ್, ಪೆಟ್ರೋಲ್ ಸಿಗುವುದಿಲ್ಲವೆಂದು ತಿಳಿದ ತಕ್ಷಣ ಗ್ರಾಹಕರು ತಮ್ಮ ವಾಹನ, ಮೋಟರ್, ಸೈಕಲ್‌ಗಳ ಟ್ಯಾಂಕ್ ಭರ್ತಿ ಮಾಡಿಕೊಂಡು ಬಾಟಲಿಗಳಲ್ಲಿ ಪೇಟ್ರೋಲ್ ತೆಗೆದುಕೊಂಡು ಶೇಖರಣೆ ಮಾಡಿಕೊಂಡರು.


ಆದರೂ ಒಂದೆರಡು ಪಂಪುಗಳಲ್ಲಿ ಗ್ರಾಹಕರಿಗೆ ಅಗತ್ಯವಾದ ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯಥೆಯವಾಗಿತ್ತು. ಅಲ್ಲಿ ನೂ ಸ್ಟಾಕ್ ಬೋರ್ಡ ಹಾಕುವ ಮೂಲಕ ಬಂದ ಗ್ರಾಹಕರಲ್ಲಿ ನಿರಾಸೆ ಮೂಡಿಸಿತ್ತು. ಗ್ರಾಹಕರಲ್ಲಿ ಇನ್ಮುಂದೆ ಪೆಟ್ರೋಲ್, ಡೀಸೆಲ್ ಯಾವ ದಿನದಂದು ಸಿಗುತ್ತದೆ ಎಂದು ತಾವು ಮಾತನಾಡಿಕೊಂಡು ಮನೆಯಲ್ಲಿ ಪೆಟ್ರೋಲ್, ಡೀಸೆಲ್ ಇರಲಪ್ಪಾ ಅಂತಾ ತಿಳಿದು ಸ್ಟಾಕ್ ಇಟ್ಟುಕೊಂಡಿದ್ದಾರೆ.