Home ಜಿಲ್ಲೆ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ; ದೇಶಪಾಂಡೆ

ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ; ದೇಶಪಾಂಡೆ

ಕಮಲನಗರ: ಏ.27:2026ರ ಜೂನ ರೊಳಗೆ ಗ್ರಾಮ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಪಿಡಿಒ ವೆಂಕಟರಾವ ದೇಶಪಾಂಡೆ ಹೇಳಿದರು.

ತಾಲ್ಲುಕಿನ ಡಿಗ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ರಾಂಪೂರು ಗ್ರಾಮದಲ್ಲಿ ಈಚೆಗೆ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಂಡ ಪರಿಣಾಮ ಶನಿವಾರ ಗ್ರಾಮದ ರಸ್ತೆ ಸಮೀಪದ ಕೊಳವೆಬಾವಿ ರೀಪೇರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಹವಾಲು ಸ್ವಿಕರಿಸಿಕೊಂಡ ನಂತರ ಅವರು ಮಾತನಾಡಿದರು.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾಮಗಾರಿ ಹಾಗೂ ತುರ್ತಾಗಿ ಆಗಲೇಬೇಕಿರುವ ಕೆಲಸದ ಕುರಿತು ಮಾಹಿತಿ ಪಡೆದರು.

ರಾಷ್ಟ್ರೀಯ ಮೋದಿ ಸೆವಾ ಸಮಿತಿ ತಾಲ್ಲೂಕು ಘಟಕ ಅಧ್ಯಕ್ಷ ಬಬನ ರಾಠೋಡ್, ಸಚಿನ, ಮಂಗೇಶ, ಸೂರ್ಯಕಾಂತ, ಸಾಗರ, ಭೀಮರಾವ, ಗಣಪತಿ ಹಾಗೂ ಗ್ರಾಮದ ಮಹಿಳೆಯರು ಇದ್ದರು.