Home ಜಿಲ್ಲೆ ಕಲಬುರಗಿ ದುರ್ಬಲರ ಬಾಳಿನಲ್ಲಿ ಬೆಳಕು ನೀಡಿದ ಪಂಚ ಗ್ಯಾರಂಟಿ ಯೋಜನೆ ; ಅರುಣಕುಮಾರ ಪಾಟೀಲ

ದುರ್ಬಲರ ಬಾಳಿನಲ್ಲಿ ಬೆಳಕು ನೀಡಿದ ಪಂಚ ಗ್ಯಾರಂಟಿ ಯೋಜನೆ ; ಅರುಣಕುಮಾರ ಪಾಟೀಲ

ಅಫಜಲಪುರ ; ಮಾ.14: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಯೂ ದುರ್ಬಲರ ಬಾಳಿನಲ್ಲಿ ಬೆಳಕು ನೀಡಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ್ ಹೇಳಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ
ಹಮ್ಮಿಕೊಂಡಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ
ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಶೀಘ್ರದಲ್ಲೇ ತಾಲೂಕು ಹಂತದಲ್ಲಿ ಗ್ಯಾರಂಟಿ ಫಲಾನುಭವಿಗಳ ಬೃಹತ್ ಸಮಾವೇಶ ನಡೆಸಲಾಗುವುದು, ಸಮಾರಂಭದ ಯಶಸ್ಸಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಕಾಂಗ್ರೆಸ್ ಪಕ್ಷ ಮೊದಲು ಗ್ಯಾರಂಟಿ ಯೋಜನೆ ಜಾರಿಗೆ ತಂದಾಗ ಎಲ್ಲರೂ ವಿರೋಧಿಸಿದರೆ, ಬಳಿಕ ಎಲ್ಲರೂ ನಮ್ಮ ಯೋಜನೆಗಳನ್ನೇ ಜಾರಿ ಮಾಡುತ್ತಿದ್ದಾರೆ.
ಜನಪರ ಮತ್ತು ಅಭಿವೃದ್ಧಿಪರ ಕಾರ್ಯಕ್ಕೆ ಸರ್ಕಾರ
ಬದ್ಧವಾಗಿದೆ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ
ಜಮಾದಾರ ಮಾತನಾಡಿ, ತಾಲೂಕಿನಾದ್ಯಂತ ಗೃಹಜ್ಯೋತಿ ಅಡಿಯಲ್ಲಿ 43,212 ಫಲಾನುಭವಿಗಳಿಗೆ 52.88 ಕೋಟಿ ರೂ., ಯುವನಿಧಿಯಡಿ 3,082 ವಿದ್ಯಾರ್ಥಿಗಳಿಗೆ 6.54 ಕೋಟಿ ರೂ, ಅನ್ನಭಾಗ್ಯದಡಿ 50,972 ಪಡಿತರರಿಗೆ 1,884 ಟನ್ ಆಹಾರ
ಧಾನ್ಯ, ಶಕ್ತಿ ಯೋಜನೆಯಡಿ 1,45,000 ಸ್ತ್ರೀ ಪ್ರಯಾಣಿಕರಿಗೆ 59.24 ಕೋಟಿ ರೂ., ಗೃಹಲಕ್ಷ್ಮಿಯಡಿ 51,728 ಫಲಾನುಭವಿಗಳಿಗೆ 10.34 ಕೋಟಿ ರೂ.
ವ್ಯಯಿಸಲಾಗಿದೆ. ಇಡೀ ಜಿಲ್ಲೆಗೆ ಗ್ಯಾರಂಟಿ
ಯೋಜನೆಯಡಿ 2,500 ಕೋಟಿ ರೂ. ಹಣ
ನಮ್ಮ ಸರ್ಕಾರ ನೀಡಿದೆ ಎಂದು ತಿಳಿಸಿದರು.

ತಾಪಂ ಇಒ ವೀರಣ್ಣ ಕೌಲಗಿ ಮಾತನಾಡಿದರು. ಪ್ರಮುಖರಾದ ಅಂಬರೀಶ ಬುರಲಿ, ದತ್ತು
ಘಾರ, ರಾಜಕುಮಾರ ಬಬಲಾದ, ಪ್ರವೀಣ
ಕಲ್ಲೂರ, ಸುಧಾಕರ ಎಸ್.ಕೆ., ಗುರುಕಿರಣ
ಮಾಸ್ಟರ್, ಅನುಸುಯಾ ಸುಲೇಕರ, ನಿಂಗಣ್ಣ
ಎಸ್., ಪ್ರವೀಣ ಹೇರೂರ, ಎ.ಎ.ಭೋವಿ,

ಖೈಮುದ್ದಿನ್, ಚಿದಾನಂದ ಕೊಳ್ಳಿ ಇತರರಿದ್ದರು.

ರಾಜ್ಯ ಸರ್ಕಾರ ಪ್ರಸಕ್ತ ಆಯವ್ಯಯದಲ್ಲಿ ಕ್ಷೇತ್ರಕ್ಕೆ
ಭರಪುರ ಕೊಡುಗೆ ನೀಡಿದೆ. ಅಫಜಲಪುರದಲ್ಲಿ
ಒಳ ಚರಂಡಿ ಅಭಿವೃದ್ಧಿಗೆ ಸುಮಾರು 150 ಕೋಟಿ
ರೂ., ಕಾರ್ಮಿಕ, ಶ್ರಮಿಕರ ಮಕ್ಕಳಿಗೆ ವಸತಿ ಶಾಲೆಗೆ 35 ಕೋಟಿ ರೂ., ಗ್ರಾಮೀಣ ರಸ್ತೆಗೆ 21 ಕೋಟಿ ರೂ., ಪಿಎಂ ಮಿತ್ರ ಪಾರ್ಕ್ ಅಭಿವೃದ್ಧಿಗೆ 75 ಕೋಟಿ ರೂ. ನೀಡಲಾಗಿದೆ.

  • ಅರುಣಕುಮಾರ ಪಾಟೀಲ್ ಅಧ್ಯಕ್ಷರು, ಕೆಕೆಆರ್ಟಿಸಿ

ಸರ್ಕಾರ ಯೋಜನೆಯ ಬಗ್ಗೆ ಟೀಕಿಸಿದ
ಆಹಾರ ನಿರೀಕ್ಷಕನ ವಿರುದ್ಧ ಕ್ರಮ.

ರಾಜ್ಯ ಸರ್ಕಾರ ಯೋಜನೆಗಳನ್ನು ಟೀಕಿಸಿದ ಅಫಜಲಪುರದ ಆಹಾರ ನಿರೀಕ್ಷಕ ಹರಿದಾಸ ವಿರುದ್ಧ
ಕ್ರಮ ಕೈಗೊಳ್ಳಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಒತ್ತಾಯಿಸಿದ ಪ್ರಸಂಗ
ಶುಕ್ರವಾರ ನಡೆಯಿತು. ಸರ್ಕಾರಿ ನೌಕರನಾಗಿ ಸೋಷಿಯಲ್ ಮಿಡಿಯಾದಲ್ಲಿ ಮಹತ್ವಾಕಾಂಕ್ಷಿ
ಗ್ಯಾರಂಟಿ ಯೋಜನೆಗಳ ಕುರಿತು ಅವಹೇಳನಕಾರಿಯಾಗಿ ಬರಹ ಹಂಚಿಕೊಂಡಿದ್ದಾರೆ. ಹೀಗಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಕೆಕೆಆರ್‍ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಜಮಾದಾರ ಮಧ್ಯಪ್ರವೇಶಿಸಿ, ಅಧಿಕಾರಿ ವಿರುದ್ಧ ಸೂಕ್ತ ಕ್ರಮವಹಿಸಲು ಇಲಾಖೆಗೆ ಸೂಚಿಸಲಾಗುತ್ತದೆ ಎಂದು ಹೇಳಿದರು.