
ಹುಬ್ಬಳ್ಳಿ, ಏ ೧೫: ನಗರದ ಹಳೇ ಹುಬ್ಬಳ್ಳಿಯ ಚಿಟ್ಟಾ ಕಾಂಪ್ಲೆಕ್ಸ್ನಲ್ಲಿ ಫ್ಯೂಚರ್ ಫೌಂಡೇಶನ್ ಸಂಸ್ಥೆಯ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಜರುಗಿತು.
ಹುಬ್ಬಳ್ಳಿ ಧಾರವಾಡ ಪೂರ್ವ ಮತ ಕ್ಷೇತ್ರದ ಶಾಸಕರಾದ ಪ್ರಸಾದ ಅಬ್ಬಯ್ಯ ಅವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಹು.ಧಾ ಮಹಾನಗರ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ತಾಫಹುಸೇನ ಹಳ್ಳೂರ, ಅನಿಲಕುಮಾರ ಪಾಟೀಲ, ಸನಾ ಸಂಸ್ಥೆಯ ನಿರ್ದೇಶಕರಾದ ಅಶ್ರಫ್ ಅಲಿ, ಮಾಜಿ ಪಾಲಿಕೆ ಸದಸ್ಯರಾದ ಅಬ್ದುಲ್ ವಹಾಬ ಮುಲ್ಲಾ, ಸಮಾಜ ಸೇವಕರು ಯುವ ಮುಖಂಡರಾದ ಸುರೇಶ ಮಾನಶೆಟ್ಟರ, ಗಿರೀಶ ಮಾನಶೆಟ್ಟರ ಹಾಗೂ ಗಣ್ಯರು ಆಗಮಿಸಿದ್ದರು.
ಸಂಸ್ಥೆಯ ಅದ್ಯಕ್ಷರಾದ ಸಾದಿಕ್ ಖಾನ ಹಕಿಂ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗಣ್ಯರಿಗೆ ಸನ್ಮಾನಿಸಿ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಕಂಪ್ಯೂಟರ್, ಮೆಹಂದಿ, ಹೊಲಿಗೆ, ಬ್ಯುಟಿಷಿಯನ್, ಇಂಗ್ಲಿಷ್, ಹೀಗೆ ವಿವಿಧ ಕೌಶಲ್ಯದ ತರಬೇತಿ ನೀಡಲಾಗುವುದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ಯೂಚರ ಫೌಂಡೇಶನ್ ಪದಾಧಿಕಾರಿಗಳಾದ ನವೀನಕುಮಾರ ಮಡಿವಾಳರ, ಶಕೀಲ್ ಧಾರವಾಡ, ಶ್ರೀಕಾಂತ ತೇಲಗರ, ಮುನ್ನಾಭಾಯಿ ಗುಡಗೇರಿ, ಅಬ್ಬಾಸ್ ಪಾನಿಗಟ್ಟಿ, ಜಮೀರ ಬಿಜಾಪುರ, ಇಸಾಕ ಮುರಾದಖಾನ, ನಿಯಾಜ ಬೇಪಾರಿ, ಶಮ್ಸಿರ ಬಿಜಾಪುರ, ಅಯಾನ ಅತ್ತಾರ ಮತ್ತಿತರರು ಉಪಸ್ಥಿತರಿದ್ದರು.






















