Home ಜಿಲ್ಲೆ ಕಲಬುರಗಿ ಜಾತಿ ಜನಗಣತಿ ಪ್ರಕ್ರಿಯೆಯಲ್ಲಿ ಓಬಿಸಿ ವರ್ಗಕ್ಕೆ ಪ್ರತ್ಯೇಕ ಗುರುತು ನೀಡಬೇಕು: ದೇವೇಂದ್ರ ಚಿಗರಳ್ಳಿ ಆಗ್ರಹ

ಜಾತಿ ಜನಗಣತಿ ಪ್ರಕ್ರಿಯೆಯಲ್ಲಿ ಓಬಿಸಿ ವರ್ಗಕ್ಕೆ ಪ್ರತ್ಯೇಕ ಗುರುತು ನೀಡಬೇಕು: ದೇವೇಂದ್ರ ಚಿಗರಳ್ಳಿ ಆಗ್ರಹ

ಕಲಬುರಗಿ :ಏ.೧೬:ರಾಜ್ಯದಲ್ಲಿ ಜಾರಿಯಾಗುತ್ತಿರುವ ಜಾತಿ ಜನಗಣತಿ ಕಾರ್ಯವನ್ನು ಸ್ವಾಗತಿಸಿ ಅಭಿನಂದಿಸಿದ ರಾಷ್ಟ್ರೀಯ ಸಮಾಜ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರಾದ ದೇವೇಂದ್ರ ಚಿಗರಳ್ಳಿ, ಪ್ರಸ್ತುತ ಮನೆ-ಪಟ್ಟಿ ಸಂಗ್ರಹಣೆಯ ರೂಪರೇಖೆಯಲ್ಲಿ ಕಂಡುಬರುವ ಕೆಲವು ಗಂಭೀರ ಕೊರತೆಗಳ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಾತಿ ಜನಗಣತಿ ದೀರ್ಘಕಾಲದಿಂದಲೂ ಸಮಾಜದ ನ್ಯಾಯಸಮ್ಮತ ಬೇಡಿಕೆಯಾಗಿದ್ದು, ಅದನ್ನು ಸರ್ಕಾರ ಕೈಗೆತ್ತಿಕೊಂಡಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ. ಆದರೆ ಈ ಮಹತ್ವದ ಪ್ರಕ್ರಿಯೆಯನ್ನು ವೈಜ್ಞಾನಿಕ ಹಾಗೂ ಪಾರದರ್ಶಕವಾಗಿ ನಡೆಸುವ ನಿರೀಕ್ಷೆ ಜನರಲ್ಲಿ ಇದ್ದರೂ, ಪ್ರಸ್ತುತ ಪ್ರಶ್ನಾವಳಿಯ ವಿನ್ಯಾಸವು ಆ ನಂಬಿಕೆಗೆ ಧಕ್ಕೆಯುಂಟು ಮಾಡುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮನೆ-ಪಟ್ಟಿ ಪ್ರಶ್ನಾವಳಿಯ ಪ್ರಶ್ನೆ ಸಂಖ್ಯೆ ೧೨ರಲ್ಲಿ ಸಾಮಾಜಿಕ ವರ್ಗೀಕರಣಕ್ಕಾಗಿ ಕೇವಲ ಅನುಸೂಚಿತ ಜಾತಿಗಳು (Sಅ), ಅನುಸೂಚಿತ ಜನಜಾತಿಗಳು (Sಖಿ) ಮತ್ತು “ಇತರೆ” ಎಂಬ ಮೂರು ವಿಭಾಗಗಳನ್ನಷ್ಟೇ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಅವರು ತಿಳಿಸಿದ್ದಾರೆ. ವಿಶೇಷವಾಗಿ ಇತರೆ ಹಿಂದುಳಿದ ವರ್ಗಗಳು (ಔಃಅ) ಹಾಗೂ ಸಾಮಾನ್ಯ ವರ್ಗಕ್ಕೆ ಪ್ರತ್ಯೇಕ ಗುರುತು ಇಲ್ಲದಿರುವುದು, ಸಂಗ್ರಹವಾಗುವ ಮಾಹಿತಿಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಾಗಿದೆ ಎಂದು ಹೇಳಿದ್ದಾರೆ.
ವಿಶಾಲ ಜನಸಂಖ್ಯೆಯನ್ನು “ಇತರೆ” ಎಂಬ ಅಸ್ಪಷ್ಟ ವರ್ಗದಲ್ಲಿ ಸೇರಿಸುವುದು ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ೨೦೧೧ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಜನಗಣತಿ (Sಇಅಅ) ಸಂದರ್ಭದಲ್ಲಿ ಕಂಡುಬAದ ದೋಷಗಳು ಮರುಕಳಿಸುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ದೇಶದ ಓಬಿಸಿ ಜನಸಂಖ್ಯೆಯ ಬಗ್ಗೆ ನಿಖರ ಮಾಹಿತಿ ಲಭ್ಯವಾಗದ ಅಪಾಯವಿದ್ದು, ಸಂವಿಧಾನದ ೧೫(೪) ಮತ್ತು ೧೬(೪) ಕಲಂಗಳಡಿ ನೀಡಲಾಗುವ ಮೀಸಲಾತಿ ನೀತಿಗಳ ಮೇಲೂ ಪರಿಣಾಮ ಬೀಳಬಹುದು. ಜೊತೆಗೆ ಭವಿಷ್ಯದ ನೀತಿನಿರ್ಣಯ ಹಾಗೂ ಕ್ಷೇತ್ರ ಪುನರ್‌ವಿಭಜನೆ ಪ್ರಕ್ರಿಯೆಗಳಿಗೂ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಈ ಸಮಸ್ಯೆಗಳಿಗೆ ಪರಿಹಾರವಾಗಿ ದೇವೇಂದ್ರ ಚಿಗರಳ್ಳಿ ಕೆಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಪ್ರಶ್ನೆ ಸಂಖ್ಯೆ ೧೨ರಲ್ಲಿ ಓಬಿಸಿ ವರ್ಗವನ್ನು ಪ್ರತ್ಯೇಕವಾಗಿ ಸೇರಿಸುವಂತೆ ತಿದ್ದುಪಡಿ ಮಾಡಬೇಕು. ರಾಷ್ಟ್ರೀಯ ಮಟ್ಟದಲ್ಲಿ ಸಮಾಲೋಚನಾ ಸಭೆಗಳನ್ನು ನಡೆಸಿ ರಾಜಕೀಯ ಪಕ್ಷಗಳು, ಹಿಂದುಳಿದ ವರ್ಗ ಆಯೋಗಗಳು ಹಾಗೂ ತಜ್ಞರನ್ನು ಒಳಗೊಳ್ಳಬೇಕು. ಉಪಜಾತಿಗಳ ಮಾಹಿತಿಯನ್ನು ಸಂಗ್ರಹಿಸಲು ಸಮರ್ಪಕ ವ್ಯವಸ್ಥೆ ರೂಪಿಸಬೇಕು. ಜೊತೆಗೆ ಪ್ರಾಥಮಿಕ ಹಾಗೂ ಅಂತಿಮ ಮಾಹಿತಿಯ ಪ್ರಕಟಣೆಗೆ ಸ್ಪಷ್ಟ ವೇಳಾಪಟ್ಟಿಯನ್ನು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಾತಿ ಜನಗಣತಿಯ ಯಶಸ್ಸು ಅದರ ಆರಂಭಿಕ ಹಂತದ ನಿಖರತೆಯ ಮೇಲೆ ಅವಲಂಬಿತವಾಗಿದ್ದು, ಯಾವುದೇ ದೋಷಗಳು ದೀರ್ಘಕಾಲೀನ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಮೊದಲ ಹಂತದ ಮುಂದಿನ ಜಾರಿಗೆ ಮುನ್ನ ಅಗತ್ಯ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಸರ್ಕಾರವನ್ನು ವಿನಂತಿಸಿದ್ದಾರೆ.