Home ಜಿಲ್ಲೆ ಕೆಳಮಟ್ಟದಲ್ಲಿ ವಿಮಾನ ಹಾರಾಟ

ಕೆಳಮಟ್ಟದಲ್ಲಿ ವಿಮಾನ ಹಾರಾಟ

ಲಕ್ಷ್ಮೇಶ್ವರ,ಮೇ9: ಲಕ್ಷ್ಮೇಶ್ವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ವಿಮಾನವೊಂದು ಅತ್ಯಂತ ಕೆಳಮಟ್ಟದಲ್ಲಿ ಹಾರಾಡುವದನ್ನು ಕಂಡು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಇದುವರೆಗೂ ಅತ್ಯಂತ ಮೇಲ್ಮಟ್ಟದಲ್ಲಿ ಹಾರಾಡುವದನ್ನು ಕಂಡಿದ್ದ ಗ್ರಾಮಸ್ಥರಿಗೆ ಈಗ ಏಕಾಏಕಿ ವಿಮಾನವೊಂದು ಅತ್ಯಂತ ಕೆಳಮಟ್ಟದಲ್ಲಿ ಹಾರಾಡುತ್ತಿರುವುದರಿಂದ ಇದೇನಾದರೂ ಮಾಹಿತಿ ಸಂಗ್ರಹಣೆಗಾಗಿ ಅಥವಾ ಬೌಗೋಳಿಕ ಖನಿಜ ಸಂಪತ್ತುಗಳ ಸಂಶೋದನೆಗಾಗಿ ಅನ್ವೇಷಣೆಯೇ? ಎಂಬ ಪ್ರಶ್ನೆ ಒಂದು ಕಡೆ ಆದರೆ ವಿಮಾನಯಾನ ಇಲಾಖೆಯವರು ಆಗಲಿ ಜಿಲ್ಲಾಧಿಕಾರಿಗಳಾಗಲಿ ಪೆÇಲೀಸ್ ಇಲಾಖೆಯವರು ಆಗಲಿ ಯಾವುದೇ ಸ್ಪಷ್ಟವಾಗಿ ಮಾಹಿತಿಯನ್ನು ಹರಿಬಿಟ್ಟಿಲ್ಲ.