Home ಜಿಲ್ಲೆ ಮಕ್ಕಳು ಕಾನೂನು ಅರಿತುಕೊಳ್ಳಲಿ

ಮಕ್ಕಳು ಕಾನೂನು ಅರಿತುಕೊಳ್ಳಲಿ

ಬೀದರ್: ಮಕ್ಕಳು ಕಾನೂನು ಅರಿತುಕೊಳ್ಳಬೇಕು ಎಂದು ಬಗದಲ್ ಠಾಣೆ ಪಿಎಸ್‌ಐ ನಂದಿನಿ ಹೇಳಿದರು.
ತಾಲ್ಲೂಕಿನ ಮಂದಕನಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುರಕ್ಷಿತ ಬಾಲ್ಯ ಅಭಿಯಾನ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣಕ್ಕೆ ತೊಡಕಾಗುವ ಸಾಮಾಜಿಕ ಅಡೆ ತಡೆಗಳನ್ನು ಧೈರ್ಯವಾಗಿ ಮೆಟ್ಟಿ ನಿಲ್ಲಬೇಕು. ಸ್ವಯಂ ರಕ್ಷಣೆ ಕೌಶಲ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳು ಏನೇ ಸಮಸ್ಯೆಗಳಿದ್ದರೂ ಮಕ್ಕಳ ಸಹಾಯವಾಣಿ ಸಂಖ್ಯೆ ೧೦೯೮ಗೆ ಸಂಪರ್ಕಿಸಬೇಕು ಎಂದು ಹೇಳಿದರು.
ಕಾನೂನಿನ ಬಗ್ಗೆ ತಿಳಿವಳಿಕೆ ಹೊಂದಿದ್ದಲ್ಲಿ ಅಪರಾಧಗಳಿಂದ ದೂರ ಇರಬಹುದು ಎಂದು ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಪಾಂಡುರAಗ ಬೆಲ್ದಾರ್ ಹೇಳಿದರು.
ಬಾಲ್ಯವನ್ನು ಆಹ್ಲಾದಕರವಾಗಿ ಆನಂದಿಸುವುದು ಮಕ್ಕಳ ಅವಶ್ಯಕತೆಗಳಲ್ಲಿ ಒಂದು ಎಂದು ಗಣಿತ ಶಿಕ್ಷಕ ಜಗದೀಶಕುಮಾರ ನಿಂಬೂರೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಬಸವರಾಜ ಕೆರಳಿ, ಬಾಬರ್ ಹುಸೇನ್, ಶಾಜಿಯಾ, ಝರೀನ್ ಸುಲ್ತಾನಾ, ದೀನಾ ಆ್ಯಂಟಿನ್, ರಿಜ್ವಾನಾ, ದತ್ತಮ್ಮ ಮತ್ತಿತರರು ಇದ್ದರು.
ಝಾಕೀರ್ ಹುಸೇನ್ ಸ್ವಾಗತಿಸಿದರು. ಶ್ರೀನಿವಾಸ್ ಜಮಾದಾರ್ ವಂದಿಸಿದರು.