
ಹುಬ್ಬಳ್ಳಿ, ಮೇ5: ನಗರದ ಅರವಿಂದನಗರದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಮಹಾಪೌರರಾದ ಜ್ಯೋತಿ ಪಾಟೀಲ ಅವರು ಜಾತ್ರಾಮಹೋತ್ಸವಕೆ’್ಕ ಚಾಲನೆ ನೀಡಿದರು.
ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜೀವನದಲ್ಲಿ ಕಷ್ಟ ಸುಖಗಳು ಬರುವುದು ಸಾಮಾನ್ಯ, ಸುಖ ಬಂದಾಗ ಹಿಗ್ಗದೆ ಕಷ್ಟಗಳು ಬಂದಾಗ ಕುಗ್ಗದೆ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಲೋಕದೆಲ್ಲೆಡೆ ಶಾಂತಿ ನೆಲೆಸಿ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಪ್ರಸಾದವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತೋಟಪ್ಪ ನಿಡಗುಂದಿ, ಮಹೇಶ ದಾಬಡೆ, ಸುರೇಶ ಪೂಜಾರಿ, ಎಚ್.ಪಿ. ಧೂಪದ, ಗುರು ಬನ್ನಿಕೊಪ್ಪ ನಾಗರಾಜ ಕತ್ರಿಮಲ್, ನಾರಾಯಣಸಿಂಗ್ ರಜಪೂತ, ಬಸವಂತಪ್ಪ ಅನವಾಲ, ನಾಗೇಶ್ ಡೊಂಗರೆ, ಯಲ್ಲಪ್ಪ ಕೋಸಗಿ, ದೇವೇಂದ್ರ ಪಾಂಡವ, ಶಿವರಾಜ ಪುಸಲೂರ, ಶ್ರೀಧರ ಕೋಪರ್ಡೆ, ಶ್ರೀಮತಿ ಪಾರ್ವತಿದೇವಿ ಪಾಟೀಲ, ರಜನಿ ದೇಶಪಾಂಡೆ, ಅನುಪಮಾ ಅಕ್ಕೂರ, ಶ್ರೀದೇವಿ ಧೂಪದ, ಶೈಲಜಾ ಹಳ್ಳಿಕೇರಿ, ಪದ್ಮಾ ದಿವಟೆ, ಲತಾ ಹಳ್ಳಿಕೇರಿ, ಕೋಮಲ ಮುಗಳೆ, ಪೂರ್ಣಿಮಾ ಕ್ಷೀರಸಾಗರ, ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಮತ್ತಿತರರು ಇದ್ದರು.





















