Home ಜಿಲ್ಲೆ ಕರ್ನಾಟಕ ಆರ್.ಟಿ.ಐ. ಕಾರ್ಯಕರ್ತರ ಸಂಘದ ಪ್ರಥಮ ಜಿಲ್ಲಾ ಸಮ್ಮೇಳನ

ಕರ್ನಾಟಕ ಆರ್.ಟಿ.ಐ. ಕಾರ್ಯಕರ್ತರ ಸಂಘದ ಪ್ರಥಮ ಜಿಲ್ಲಾ ಸಮ್ಮೇಳನ

ಬೀದರ:ಮೇ.೧೯: ಕರ್ನಾಟಕ ಆರ್.ಟಿ.ಐ. ಕಾರ್ಯಕರ್ತರ ಸಂಘದ ಬೀದರ ಜಿಲ್ಲಾ ಸಮಿತಿಯ ಪ್ರಥಮ ಜಿಲ್ಲಾ ಸಮ್ಮೇಳನವು ಮೇ ೧೭ರಂದು ಜೈಶೀಲಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ರಾಜ್ಯ ಸಮಿತಿಯ ಅಧ್ಯಕ್ಷ ಬಾಬುರಾವ ಹೊನ್ನಾ, ಉಪಾಧ್ಯಕ್ಷ ಮಲ್ಲಿಕಾರ್ಜುನ ಪನಸಾಲೆ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಘಾಳೆಪ್ಪ ಸೋರಳ್ಳಿ ಅವರ ಮಾರ್ಗದರ್ಶನದಲ್ಲಿ ಸಮ್ಮೇಳನ ಆಯೋಜಿಸಲಾಗಿತ್ತು. ರಾಜ್ಯ ಸಮಿತಿ ಸದಸ್ಯ ಪ್ರಭು ಹೊಚ್ಚಕನಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಮ್ಮೇಳನದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಬಾಬುರಾವ ಹೊನ್ನಾ, ೨೦೦೫ರಲ್ಲಿ ಜಾರಿಯಾದ ಮಾಹಿತಿ ಹಕ್ಕು ಕಾಯ್ದೆಯಿಂದ ಸಾಮಾನ್ಯ ನಾಗರಿಕರಿಗೆ ಅಧಿಕಾರಿಗಳನ್ನು ಪ್ರಶ್ನಿಸುವ ಹಕ್ಕು ದೊರೆತಿದೆ. ಆದರೆ ಮಾಹಿತಿ ಕೇಳುವ ನಾಗರಿಕರಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಾಹಿತಿ ಹಕ್ಕಿನಡಿ ಕೇಳಿದ ಮಾಹಿತಿಯನ್ನು ಸಕಾಲದಲ್ಲಿ ನೀಡದೆ ಜನರಿಗೆ ತೊಂದರೆ ಉಂಟುಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಇದೇ ವೇಳೆ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ನಿರುದ್ಯೋಗಿ ಯುವಕರನ್ನು “ಜೀರಳೆ” ಹಾಗೂ “ಪರಾವಲಂಬಿ ಜೀವಿಗಳು” ಎಂದು ಉಲ್ಲೇಖಿಸಿರುವುದನ್ನು ಸಮ್ಮೇಳನದಲ್ಲಿ ತೀವ್ರವಾಗಿ ಖಂಡಿಸಲಾಯಿತು. ಉನ್ನತ ಹುದ್ದೆಯಲ್ಲಿರುವವರು ಯುವಜನತೆಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಲಾಯಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ಘಾಳೆಪ್ಪ ಸೋರಳ್ಳಿ ಅವರು ಬ್ರೀಮ್ಸ್ ಆಸ್ಪತ್ರೆ ಹಾಗೂ ರೈಲ್ವೆ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಪನಸಾಲೆ ಜನವಾಡ ಅವರು ಅರಣ್ಯ ಇಲಾಖೆ ಹಾಗೂ ಅಂಚೆ ಇಲಾಖೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಆರ್.ಟಿ.ಐ. ಕಾರ್ಯಕರ್ತರು ಸಂಘಟಿತರಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕೆಂದು ಕರೆ ನೀಡಿದರು.

ನಜೀರ್ ಅಹ್ಮದ್ ಚೊಂಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಆರ್.ಟಿ.ಐ. ಕಾರ್ಯಕರ್ತರ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜೈಶೀಲಕುಮಾರ ಅವರನ್ನು ಜಿಲ್ಲಾಧ್ಯಕ್ಷರಾಗಿ, ಪಪ್ಪುರಾಜ ಮೇತ್ರೆ, ಸಲ್ಮಾನ ಇಜಾಜ್ ಖಾನ್ ಹಾಗೂ ಶಾಹ್ ಮುಬಾಶೀರ್ ಇಸ್ಲಾಂ ಅವರನ್ನು ಉಪಾಧ್ಯಕ್ಷರಾಗಿ, ಅನ್ವರ್ ಶಾಹ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಅಬ್ದುಲ್ ಖಾಲೀದ್ ಹಾಗೂ ಶೇಖ್ ಅಮ್ಜದ್ ಪಾಶಾ ಅವರನ್ನು ಜಂಟಿ ಕಾರ್ಯದರ್ಶಿಗಳಾಗಿ, ಶಫಾಯತ್ ಅಲಿ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು.

ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಅಬ್ದುಲ್ ಶಮಿ ಅಲ್ಲಿಮೋದ್ದೀನ್, ಗುಂಡಪ್ಪ ಜ್ಯೋತಿ, ಅರುಣಕುಮಾರ, ರವಿ ಬನಸುಡೆ ಚಿದ್ರಿ, ಸೂರ್ಯಕಾಂತ, ಚಂದ್ರಕಾAತ, ಚಾಂದೋಬಾ ಹಾಗೂ ಸೋನಿ ಅವರನ್ನು ಆಯ್ಕೆ ಮಾಡಲಾಯಿತು.