
ಸೇಡಂ,ನ,01: ತಾಲೂಕ ಕ್ರೀಡಾಂಗಣದಲ್ಲಿ ತಾಲೂಕ ಆಡಳಿತದ ವತಿಯಿಂದ 70ನೆಯ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ತಹಸಿಲ್ದಾರರು ಹಾಗೂ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಶ್ರೀಯಾಂಕ್ ಎ ಧನುಶ್ರೀ ರವರು ತಾಯಿ ಭುವನೇಶ್ವರ ದೇವಿಗೆ ಪೂಜೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನರವೇರಿಸಿ ಮಾತನಾಡಿದರು. ಈ ವೇಳೆಯಲ್ಲಿ ಪುರಸಭೆಯ ಅಧ್ಯಕ್ಷರಾದ ವಿರೇಂದ್ರ ಪಾಟೀಲ್ ರುದ್ನೂರ, ತಾಲೂಕು ಪಂಚಾಯತ್ ಇಓ ಚನ್ನಪ್ಪ ರಾಯಣ್ಣನವರ, ಸಿಪಿ ಐ ಮಹಾದೇವ ದಿಡ್ಡಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವಿಶಾಲಕುಮಾರ್, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಇಮ್ರಾನ್ ಮಣಿಯರ್, ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಸ್ವಾಮಿ, ಅತಿಥಿ ಉಪನ್ಯಾಸಕರಾದ ಡಾ.ಪಂಡಿತ ಬಿ.ಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.





























