
ವಿಜಯಪುರ,ಮಾ.6:ಮಹಾರಾಷ್ಟ್ರದ ಸಂಖದ ಎಸ್. ಜಿ.ಬಿ. ಶಾಲೆಯಲ್ಲಿ ಈಚೆಗೆ ನಡೆದ ಕರಾಟೆ ಪರೀಕ್ಷೆಯಲ್ಲಿ ವಿಜಯಪುರದ 218 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಸಂಖದ ಶ್ರೀ ಗುರುಬಸವ ವಿದ್ಯಾಮಂದಿರ ಮತ್ತು ಜ್ಯೂನಿಯರ್ ಕಾಲೇಜ್ ನ ಶಾಲೆಯ ವಿದ್ಯಾರ್ಥಿನಿಯರಿಗೆ ಕರಾಟೆ ಪರೀಕ್ಷೆ (ಙeಟಟoತಿ beಟಣ) ತೆಗೆದುಕೊಳ್ಳಲಾಯಿತು. ಈ ಪರೀಕ್ಷೆಯನ್ನು ಸಾಂಗಲಿ ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಹಾಗೂ ಮಹಿಳಾ ಮತ್ತು ಹೆಣ್ಣು ಮಕ್ಕಳ ಸಬಲೀಕರಣ (ಮಹಿಳೆಯರ ಸುರಕ್ಷೆ) ವಿಷಯದಡಿಯಲ್ಲಿ ಕರಾಟೆ ಪರೀಕ್ಷೆ ನಡೆಸಲಾಯಿತು.
ಮುಖ್ಯ ಪರೀಕ್ಷಕರಾಗಿ ಬಸವರಾಜ ಬಾಗೇವಾಡಿ ಹಾಗೂ ಸಹಾಯಕರಾಗಿ ರಿಯಾಜ್ ಜಮಾದಾರ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಡಾ. ಆರ್.ಕೆ. ಪಾಟೀಲ ಅವರು ಸಂಚಾಲಕ ಕಿರಣ ಪಾಟೀಲ ಹಾಗೂ ಮುಖೋಪಾಧ್ಯಾನಿ ಕವಿತಾ ಪಾಟೀಲ, ಮೇಲ್ವಿಚಾರಕ ಶಿವಶಂಕರ ಹಿರೇಮಠ ಹಾಗೂ ಶಿಕ್ಷಕ, ಶಿಕ್ಷಕಿಯರು ಮಕ್ಕಳೊಂದಿಗೆ ಹಾಜರಿದ್ದರು ಎಂದು ದೈಹಿಕ ಶಿಕ್ಷಕ ಮಲ್ಲಪ್ಪ ಕರಾಡೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






















