
ಕೆ.ಆರ್.ಪುರ,ಏ.೧೧-ಮಹಾತ್ಮ ಜ್ಯೋತಿಬಾ ಪುಲೆ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಮಹಾತ್ಮ ಜ್ಯೋತಿಬಾ ಪುಲೆ ಅವರ ಜಯಂತೋತ್ಸವದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಕೆ.ಆರ್.ಪುರ ವಾರ್ಡನ ಅಧ್ಯಕ್ಷ ಶಿವಪ್ರಸಾದ್ ಅವರು ಶಿಕ್ಷಣ, ಮಹಿಳಾ ಸಬಲೀಕರಣ, ಮತ್ತು ಜಾತಿ ಪದ್ಧತಿ ನಿರ್ಮೂಲನೆಗಾಗಿ ಶ್ರಮಿಸಿದ ಧಿಮಂತ ಎಂದು ನುಡಿದರು.
ತಮ್ಮ ಪತ್ನಿ ಸಾವಿತ್ರಿ ಬಾ ಪುಲೆ ಅವರೊಂದಿಗೆ ಸಮಾಜದಲ್ಲಿ ಜಾತಿ ಪದ್ದತಿ,ಮಹಿಳೆಯರಿಗೆ ಶಿಕ್ಷಣ ಸೇರಿದಂತೆ, ಸಮಾಜ ಸುಧಾರಕರಾಗಿ, ಚಿಂತಕರಾಗಿ ಮತ್ತು ಕ್ರಾಂತಿಕಾರಿ ಕಾರ್ಯಕರ್ತರಾಗಿ ದುಡಿದ ಮಹನೀಯ ಎಂದು ಹೇಳಿದರು.
ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡ ಕೆ.ಹೇಮಂತ್ ಅವರು ಮಾತನಾಡಿ ೧೮೭೩ ರಲ್ಲಿ ’ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸಿ, ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡಿದರು. ಪತ್ನಿ ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಸೇರಿ ಹೆಣ್ಣುಮಕ್ಕಳಿಗಾಗಿ ಮೊದಲ ಶಾಲೆ ಪ್ರಾರಂಭಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಒಂದು ಸಾವಿರ ಮಂದಿಗೆ ಕೆ.ಹೇಮಂತ್ ಅವರು ಊಟದ ವ್ಯವಸ್ಥೆ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಹೇಮಂತ್, ಎಲ್ ಐಸಿ ವೆಂಕಟೇಶ್,ವೇಣು,ಉಮಾಶಂಕರ್, ಬಾಲಕೃಷ್ಣ, ಮುಖೇಶ್ ರಾಜ್,ಸೀನಿ,ಸೋಮಶೇಖರ್, ಕೆ.ಪಿ.ಕೃಷ್ಣ ಇದ್ದರು.
























