
ಬೀದರ್:ಮಾ.೨:ಬೀದರ್ ನಗರದ ಕರ್ನಾಟಕ ಪಿಯು ಕಾಲೇಜಿನಲ್ಲಿ ರವಿವಾರ ಶ್ರೀ ಜಗದ್ಗುರು ರೇಣುಕಾಚರ‍್ಯ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಕಾÀರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಬಸವರಾಜ್ ಬಲೂರ್ ಅವರು ಶ್ರೀ ರೇಣುಕರ‍್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಶ್ರೀ ರೇಣುಕರ‍್ಯರು ಯಾವುದೇ ಒಂದು ಜಾತಿಗೆ ಸೀಮಿತರಾಗಿರದೆ, ಮಾನವಕುಲದ ಲೋಕಕಲ್ಯಾಣಕ್ಕಾಗಿ ರ‍್ಗರ‍್ಶನ ನೀಡಿದ ಮಹನೀಯರು ಎಂದು ಅವರು ತಿಳಿಸಿದರು. ಮಾನವತೆಯ ಸಂದೇಶವನ್ನು ಸಾರಿದ ಅವರ ಉಪದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. “ಮಾನವ ರ‍್ಮಕ್ಕೆ ಜಯವಾಗಲಿ, ರ‍್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಲಿ” ಎಂಬ ಸಂದೇಶವನ್ನು ಅವರು ಹಂಚಿಕೊAಡರು.
ಕರ‍್ಯಕ್ರಮದಲ್ಲಿ ಉಪಪ್ರಾಚಾರ್ಯರಾದ ರಾಜೇಶ್ವರಿ ಪಾಟೀಲ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗಣೇಶ್ ತೊರೆ, ಸಚಿನ್ , ನಿಲೇಶ್ ರತ್ನಾಕರ್, ಈಶ್ವರಯ್ಯ ಕೊಡಂಬಲ್, ನಿತಿನ್ ರಾಥೋಡ್, ರೆಡ್ಡಿ ಮೇಡಂ, ಶಿವಕುಮಾರ ಸ್ವಾಮಿ, ವೀರೇಂದ್ರ ಪಾಟೀಲ್, ಗಣೇಶ್ ಘಂಟಿ, ರವಿ ಸ್ವಾಮಿ ಸೇರಿದಂತೆ ಸಿಬ್ಬಂದಿ ರ‍್ಗದವರು ಭಾಗವಹಿಸಿ ಜಯಂತಿಯನ್ನು ಆಚರಿಸಿದರು.



























