Home ಜಿಲ್ಲೆ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ

ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ

ಲಕ್ಷ್ಮೇಶ್ವರ,ಮಾ6: ಪಟ್ಟಣದಲ್ಲಿ ದಿನಾಂಕ ರಂದು ರವಿವಾರ ಸಂಜೆ 5:00 ಗಂಟೆಗೆ ಕೆಂಚಲಪುರದ ಮಾಗಡಿಯವರ ಇಂಡಸ್ಟ್ರಿಸ್ನಲ್ಲಿ ತಾಲೂಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಶೈಲಾ ಆದಿ ಮಾಲಕ್ಕ ದುಂದರಗಿ ಮತ್ತು ಮಂಜು ಮಾಗಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ ಅಂತರಾಷ್ಟ್ರೀಯ ದಿನಾಚರಣೆಯ ದಿನವೇ ಹುಟ್ಟಿದ ಕೃತಿಕಾಯುವರ 9ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ನನ್ನ ಅಮ್ಮ ನನ್ನ ಪ್ರಪಂಚ ಹಾಗೂ ರಂಗೋಲಿ ಸ್ಪರ್ಧೆ ಸುಕೃತಿಮಾ ಪ್ರಶಸ್ತಿ ಪ್ರಧಾನ ಸಮಾರಂಭಗಳು , ಜರುಗಲಿವೆ ಎಂದು ಹೇಳಿದರು.


ಪ್ರತಿ ವರ್ಷ ಮಂಜು ಮಾಗಡಿಯವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುವ ಮೂಲಕ ಮಹಿಳೆಯರ ಗೌರವ ಘನತೆಯನ್ನು ಹೆಚ್ಚಿಸುತ್ತಿದ್ದು ಮಹಿಳೆಯರಿಗೆ ಆದ್ಯತೆ ನೀಡುತ್ತಿರುವುದು ವಿಶೇಷವಾಗಿದೆ ಮನೆಗೆ ಮೀಸಲಾಗಿದ್ದ ಈ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ಆಚರಿಸುವ ಮೂಲಕ ವಿಶೇಷ ಅರ್ಥ ನೀಡುತ್ತಿರುವುದು ಪ್ರಶಂಷನೀಯ ಎಂದು ಹೇಳಿದರು.


ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಮಾಜದಲ್ಲಿ ವಿವಿಧ ರಂಗಗಳಲ್ಲಿ ಸೇವಿ ಸಲ್ಲಿಸಿದ ಮಹಿಳೆಯರನ್ನು ಗುರುತಿಸಿ , ಅವರನ್ನು ಸನ್ಮಾನಿಸುವ ಸಾಂಪ್ರದಾಯವನ್ನು ಹಾಕಲಾಗಿದೆ ಎಂದು ಹೇಳಿದರು ಈ ಬಾರಿ ಸುಕೃತಿಮಾ ಪ್ರಶಸ್ತಿಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ವೇದ ರಾಣಿ ದಾಸನೂರ ಅವರಿಗೆ ಪ್ರಧಾನ ಮಾಡಲಾಗುವುದು ಎಂದು ಹೇಳಿದರು ಅಲ್ಲದೆ ಸನಾತನ ಹಿಂದೂ ಧರ್ಮದ ಸಂಸ್ಕೃತಿ ಮತ್ತು ಪರಂಪರೆಗಳನ್ನು ಉಳಿಸಲು ಶ್ರಮಿಸುತ್ತಿರುವ ಮಹಿಳೆಯರನ್ನು ಗುರುತಿಸಿ ಅವರನ್ನು ಸಹ ಗೌರವಿಸಲಾಗುತ್ತಿದೆ ಎಂದು ಮಂಜುನಾಥ್ ಮಾಗಡಿ ಹೇಳಿದರು.


ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.


ಈ ಸಂದರ್ಭದಲ್ಲಿ ಪರಮೇಶ್ವರಿ ಪುರಾಣಿಕ್ ಮಠ ಜ್ಯೋತಿ ರಾಜೊಳಿ ಕಾವ್ಯ ದೇಸಾಯಿ ಡಿಬಿ ಬಳಿಗಾರ ಪೂರ್ಣಜಿ ಕರಾಟೆ ಚಂಬಣ್ಣ ಬಾಳಿಕಾಯಿ ನೀಲಪ್ಪ ಕರ್ಜೆಕ್ಕಣ್ಣವರ ಮಲ್ಲಿಕಾರ್ಜುನ ನೀರಲೂಟಿ ಪವನ ಬಂಕಾಪುರ ಮಹಾಂತೇಶ್ ಉಮಚಗಿ ಇದ್ದರು.