
ನವಲಗುಂದ, ಮೇ9 : ಇಂದಿನ ಒತ್ತಡದ ದಿನಮಾನಗಳಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವದೇ ಸವಾಲಿನ ಕೆಲಸವಾಗಿದೆ ಹಾಗೂ ನೈರ್ಮಲಿಕರಣ ಉತ್ತಮ ಆರೋಗ್ಯದ ಅಡಿಪಾಯವಾಗಿದೆ ವಿದ್ಯಾರ್ಥಿಗಳು ದೈಹಿಕ ಶ್ರಮ ವಹಿಸಿ ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದು ಅಳಗವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ ಅವಿನಾಶ ಎಸ್ ಜಿ ಹೇಳಿದರು.
ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಘಟಕ, ಆಂತರಿಕ ಭರವಸೆ ಗುಣಮಟ್ಟ ಕೋಶ ಹಾಗೂ ತಾಲೂಕ ಆಸ್ಪತ್ರೆ ನವಲಗುಂದ ಇವುಗಳ ಸಹಯೋಗದಲ್ಲಿ ಅಂತರ್ರಾಷ್ಟ್ರೀಯ ರೆಡ್ ಕ್ರಾಸ್ ದಿನಾಚರಣೆ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಂ.ಬಿ. ಬಾಗಡಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವಕರು ದುಶ್ಚಟಗಳಿಗೆ ಮಾರುಹೋಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಹಾಗೂ ವೈಯಕ್ತಿಕ ಶುಚಿತ್ವದತ್ತ ಗಮನ ಹರಿಸುತ್ತಿಲ್ಲ.
ಅತಿ ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತದಂತಹ ಮಾರಕ ಕಾಯಿಲೆಗಳಿಗೆ ಬಲಿ ಆಗುತ್ತಿದ್ದಾರೆ. ಹೀಗಾಗಿ ಯುವಜನತೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ದೀರ್ಘಾಯುಷ್ಯವಂತರಾಗಿ ಜೀವನ ನಡೆಸಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪೆÇ್ರ ಸಾತಿಹಾಳ ಆಯ್ ಬಿ, ನಾಗರತ್ನ ಕುರಡೇಕರ್, ಬಿ ವಿ ಏಣಗಿ, ಶ್ರೀಧರ ಲೋನಕರ, ಗಣೇಶ್ ಧೋoಗಡಿ, ಗಂಗಾಧರ ಗೌಡರ, ಚೈತ್ರಾ ಟಿ, ಪ್ರತಿಭಾ ನಿಡಗುಂದಿ, ಸಮೀರ ನಧಾಪ, ವೈ ಎನ್ ಗುಳುಗಂದಿ, ಡಾ ಪ್ರವೀಣ ದೊಡಮನಿ, ಸುಜಾತಾ ಬರದೂರ್, ಚೈತ್ರಾ ಪಾಟೀಲ, ಮಲ್ಲಿಕಾರ್ಜುನ ಗಡಾದ,ಜ್ಯೋತಿಭಾ ದೊಡಮನಿ, ಮಧು ಹುಣಸಗಿ, ಸುರೇಶ ಬಾರಕೇರ, ಮಂಜುನಾಥ ಜಾಡರ ಇತರರು ಇದ್ದರು.
ಖಾದಿರಬಿ ನಧಾಪ ನಿರೂಪಣೆ, ಆಯ್ ಕ್ಯೂ ಎ ಸಿ ಸಂಚಾಲಕ ಸಂತೋಷ ಹುಬ್ಬಳ್ಳಿ ಸ್ವಾಗತ, ರೆಡ್ ಕ್ರಾಸ ಘಟಕ ಸಂಚಾಲಕಿ ಸವಿತಾ ಚಿಕ್ಕಣ್ಣವರ ಪ್ರಾಸ್ತವಿಕ, ಪ್ರಸನ್ನ ಪಂಢರಿ ಅತಿಥಿಗಳನ್ನು ಪರಿಚಯ ವಸಂತ ಮುಂದಿನಮನಿ ವಂದನಾರ್ಪಣೆ ಮಾಡಿದರು.





















