
ಕಲಬುರಗಿ,ಏ 27: ಕೇಂದ್ರ ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗ ಹಾಗೂ ಶಿಕ್ಷಣ ಮತ್ತು ತರಬೇತಿ ಶಾಲೆಯ ವತಿಯಿಂದ ರಿಸರ್ಚ್ ಕನೆಕ್ಟ್ಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರುಕಾರ್ಯಕ್ರಮವನ್ನು
ಉದ್ಘಾಟಿಸಿ ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಆಶಯದಂತೆ ವಿಶ್ವವಿದ್ಯಾಲಯಗಳಲ್ಲಿಅಂತರಶಿಸ್ತೀಯ ಹಾಗೂ ಬಹು ಶಿಸ್ತೀಯ ಸಂಶೋಧನಾ ಚಟುವಟಿಕೆಗಳನ್ನುಸಕ್ರಿಯವಾಗಿ ಆರಂಭಿಸಬೇಕು ಎಂದು ಅವರು ತಿಳಿಸಿದರು.
ಸಂಶೋಧನೆಗಳು ಸಮಾಜದ ಸವಾಲುಗಳಿಗೆ ಪರಿಹಾರ ಕಂಡುಹಿಡಿದು ಉತ್ತಮ ಜೀವನ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದುಅವರು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಹೈದರಾಬಾದ್‍ನ ಯುನಿಸೆಫ್ ಶಿಕ್ಷಣ ತಜ್ಞ ಶೇಷಗಿರಿ ರಾವ್ ಉಪನ್ಯಾಸ ನೀಡಿದರು. ನಂತರಸಂಶೋಧನೆಯಲ್ಲಿ ಉದಯೋನ್ಮುಖ ಪ್ರವೃತ್ತಿಗಳು ವಿಷಯದ ಕುರಿತು ಗುಂಪು ಸಹ ಚರ್ಚೆ ನಡೆಯಿತು.
ಶಿಕ್ಷಣ ಮತ್ತು ತರಬೇತಿ ಶಾಲೆಯ ಡೀನ್ ಹಾಗೂ ವಿಭಾಗ ಮುಖ್ಯಸ್ಥ ಪೆÇ್ರ. ಜಿ. ಆರ್. ಅಂಗಡಿ ಅವರು ಮಾತನಾಡಿ ಶಿಕ್ಷಣವುಅರ್ಥಪೂರ್ಣವಾಗಿದ್ದು ಸಂತೋಷಕರ ಹಾಗೂ ಸಮೃದ್ಧ ಜೀವನಕ್ಕೆ ದಾರಿ ತೋರಿಸಬೇಕು ಎಂದು ಅಭಿಪ್ರಾಯಪಟ್ಟರು.
ಶೇಷಗಿರಿ ರಾವ್ ಅವರು ಶಾಲಾ ಶಿಕ್ಷಣದಲ್ಲಿ ಕಲಿಕೆಯ ದುರ್ಬಲ ಫಲಿತಾಂಶಗಳು, ಶಿಕ್ಷಕರ ದೃಷ್ಟಿಕೋನ ಮತ್ತು ತೆಲಂಗಾಣರಾಜ್ಯದಲ್ಲಿ ಅವರು ಎದುರಿಸುತ್ತಿರುವ ಸವಾಲುಗಳ ಕುರಿತು ಇತ್ತೀಚಿನ ಅಧ್ಯಯನಗಳ ಆಧಾರದ ಮೇಲೆ ತಮ್ಮ ಅಭಿಪ್ರಾಯಗಳನ್ನುಹಂಚಿಕೊಂಡರು.
ಪ್ಯಾನಲ್ ಚರ್ಚೆಗೆ ಕೇಂದ್ರೀಯ ವಿವಿಯ ಗ್ರಂಥಪಾಲಕರಾದ ಡಾ. ಪಿ. ಎಸ್. ಕಟ್ಟಿಮನಿ ಅವರು ಅಧ್ಯಕ್ಷತೆ ವಹಿಸಿದ್ದರು.ಗುಂಪು ಚರ್ಚೆಯಲ್ಲಿ ಡಾ. ಸಂದೀಪ್ ಇನಾಂಪುಡಿ (ಸಾರ್ವಜನಿಕ ಆಡಳಿತ ವಿಭಾಗ), ಡಾ. ಸ್ವಾಗತ್ ಘೋಷ್ (ಭೂಗೋಳಶಾಸ್ತ್ರವಿಭಾಗ), ಡಾ. ನಟರಾಜ ಪಟ್ಟೇದ್ (ಪರ್ಯಟನೆ ಮತ್ತು ನಿರ್ವಹಣಾ ವಿಭಾಗ), ಡಾ. ಸುರೇಶ್ ಅನುಗಂಟಿ (ಶಿಕ್ಷಣ ವಿಭಾಗ), ಡಾ.ಜೋಮಿಯರ್ ಬಾಗ್ರಾ (ಮನೋವಿಜ್ಞಾನ ವಿಭಾಗ) ಭಾಗವಹಿಸಿ, ಅವರು ತಮ್ಮ ತಮ್ಮ ಕ್ಷೇತ್ರಗಳ ಇತ್ತೀಚಿನ ಸಂಶೋಧನಾಧೋರಣೆಗಳ ಕುರಿತು ಚರ್ಚಿಸಿದರು.
ಕಾರ್ಯಕ್ರಮ ಸಂಯೋಜಕರಾದ ಡಾ. ಮಯೂರ್ ಪೂಜಾರಿ ಅವರು ವಂದನಾರ್ಪಣೆ ಸಲ್ಲಿಸಿ, ಶಾಲಾ ಶಿಕ್ಷಣದ ಗುಣಮಟ್ಟ ಸುಧಾರಣೆಮತ್ತು ಉನ್ನತ ಶಿಕ್ಷಣದ ಗುಣಮಟ್ಟ ಪರಸ್ಪರ ಸಂಬಂಧ ಹೊಂದಿವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ಹಾಗೂ ವಿಜ್ಞಾನ ವಿಭಾಗಗಳ 90 ಸಂಶೋಧನಾ ವಿದ್ಯಾರ್ಥಿಗಳು ಮತ್ತು 15 ಅಧ್ಯಾಪಕರುಭಾಗವಹಿಸಿದ್ದರು.
ಡಾ. ಕೆ. ತಿಯಾಗು, ಡಾ. ಆಶಾಲತಾ ಎಸ್., ಡಾ. ವಿ. ಸಾಯಿ ಅಭಿನವ್, ಡಾ. ಪಿ. ಬಿ. ಬಾಗೇವಾಡಿ, ಡಾ. ಎಂ. ಶ್ರೀದೇವಿ, ಡಾ.ಚಂದ್ರಶೇಖರ್ ಗೌಡ್, ಡಾ. ಬುಚ್ಚಿ ರೆಡ್ಡಿ ಪೆÇೀರೆಡ್ಡಿ, ಶ್ರೀ ಸಂತೋಷ್, ಸುಶ್ರೀ ಜ್ಯೋತ್ಸ್ನಾ ಹಾಗೂ ಡಾ. ಬಬ್ಲು ಕರಣ್‍ಉಪಸ್ಥಿತರಿದ್ದರು.ಸ್ವಾಗತ ಭಾಷಣವನ್ನು ತಾನ್ಯಾ ಮತ್ತು ಸೌಮ್ಯ ಅವರು ಮಾಡಿದರು.
ಪ್ಯಾನಲ್ ಚರ್ಚೆಯನ್ನು ಸುಶ್ಮಿತಾ ನಾಥ್ ಮಾಡಿದರು.ಕಿರಣ್ ಘೋಷ್ ವಂದನಾರ್ಪಣೆ ಮಾಡಿದರು




















