
ಹುಬ್ಬಳ್ಳಿ, ಮೇ11 : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕೇಂದ್ರ ಕಛೇರಿ, ಹುಬ್ಬಳ್ಳಿಯಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವುದರ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿಗಳಾದ ಶ್ರೀನಿವಾಸ ಮೂರ್ತಿ ಸಿ.ಇ. ರವರು ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ ಜೀವನ, ನುಡಿಗಳು ಹಾಗೂ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು, ಜೊತೆಗೆ, ಅವರ ಕುಟುಂಬ ಪ್ರೀತಿ, ಭಕ್ತಿಭಾವ ಮತ್ತು ಆದರ್ಶ ಜೀವನಶೈಲಿ ಸಮಾಜಕ್ಕೆ ಮಾದರಿಯಾಗಿದ್ದು, ಅವುಗಳನ್ನು ನಾವು ಅನುಸರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಹಾಯಕ ಭದ್ರತಾ ಮತ್ತು ಜಾಗ್ರತ ಅಧಿಕಾರಿಗಳಾದ ಜಗದೀಶ ಕೋಳಿ ರವರು ಹೇಮರೆಡ್ಡಿ ಮಲ್ಲಮ್ಮನವರ ಜೀವನದ ಕುರಿತು ಮಾತನಾಡಿ, ತಮ್ಮ ಭಕ್ತಿಪರತೆ, ತ್ಯಾಗ ಮತ್ತು ಸದ್ಗುಣಗಳಿಂದ ಇಡೀ ಸ್ರ್ತೀಕುಲಕ್ಕೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು. ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದ್ದರೂ ಸಹ, ಅವರು ಸಮಾಜದ ಒಳತಿಗಾಗಿ ಆದರ್ಶ ಜೀವನ ನಡೆಸಿದ ರೀತಿ ಎಲ್ಲರಿಗೂ ಪ್ರೇರಣೆಯಾಗಿದ್ದು, ನಾವು ಸಹ ಸಮಾಜಮುಖಿ ಬದುಕನ್ನು ನಡೆಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಶ್ಯಾಮಲಾ ಕೆ.ಎನ್. ಮುಖ್ಯ ಕಾನೂನು ಅಧಿಕಾರಿ, ವಿ.ಎಫ್. ವಿಜಾಪುರ, ರವೀಂದ್ರ ಅವ್ವಣ್ಣವರ, ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿರೂಪಾಕ್ಷ ಕಟ್ಟಿಮನಿ ನಿರೂಪಿಸಿ, ವಂದಿಸಿದರು.





















