
ನವಲಗುಂದ, ಮೇ11 : `ಹೇಮರೆಡ್ಡಿ ಮಲ್ಲಮ್ಮ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದರು. ಕರುಣಾಮಯಿ ಹಾಗೂ ದಾಸೋಹಿಯಾಗಿದ್ದರು ಎಂದು ತಹಶೀಲ್ದಾರ ಸುಧೀರ್ ಸಾಹುಕಾರ್ ಹೇಳಿದರು.
ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಶಿವಶರಣೆ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತೊತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
500 ವರ್ಷ ಕಳೆದರೂ ಮಲ್ಲಮ್ಮ ಜನರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ರೆಡ್ಡಿ ಕುಲದವರು ಮಲ್ಲಮ್ಮನನ್ನು ಇಂದಿಗೂ ಮಹಾತಾಯಿಯಂತೆ ಪೂಜಿಸುತ್ತಾರೆ’ ಎಂದರು.
ಜಿಲ್ಲಾ ಕೆಡಿಪಿ ಸದಸ್ಯ ಆರ್ ಎಚ್ ಕೋನರಡ್ಡಿ ಮಾತನಾಡಿ `ಮಲ್ಲಮ್ಮ ಹಲವಾರು ಪವಾಡ ಗಳನ್ನು ನಡೆಸಿರುವ ಬಗ್ಗೆ ಪುರಣಾದಲ್ಲಿ ಉಲ್ಲೇಖ ಇದೆ. ಸಂತ ಶಿಶುನಾಳ ಷರೀಫರು ಹೇಮರೆಡ್ಡಿ ಮಲ್ಲಮ್ಮನ ಕುರಿತು ಹಲವಾರು ಗೀತೆಗಳನ್ನು ರಚಿಸಿದ್ದಾರೆ. ಮಲ್ಲಮ್ಮನ ಜೀವನದ ತತ್ವ, ಚಿಂತನೆಗಳು ಎಲ್ಲರಿಗೂ ಆದರ್ಶನೀಯ’ ಎಂದರು.
ಗಣೇಶ ಚಳ್ಳಕೆರೆ, ರವೀಂದ್ರಗೌಡ ಪಾಟೀಲ,ನಾಗರಾಜ ಕರಿಸಕ್ರಣ್ಣವರ ರಡ್ದಿ ಸಮಾಜದ ತಾಲ್ಲೂಕು ಅಧ್ಯಕ್ಷ ಗೋವಿಂದರಡ್ಡಿ ನಡುವಿನಮನಿ, ಕಲ್ಲಪ್ಪ ಹುಬ್ಬಳ್ಳಿ, ಎಚ್ ಎನ್ ಲಿಂಗರಡ್ಡಿ, ಪಾಂಡಪ್ಪ ಚವಣ್ಣವರ, ಕೃಷ್ಣರಡ್ಡಿ ಕುರಹಟ್ಟಿ ಸೇರಿ ಸಮಾಜದ ಪ್ರಮುಖರು, ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.





















