
ಕಲಬುರಗಿ,ಮೇ.21-ಮೊಬೈಲ್ ಹ್ಯಾಕ್ ಮಾಡಿ 2,58,053 ರೂ.ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಹೇಂದ್ರ ಫೈನಾನ್ಸ್ ಕಂಪನಿಯಲ್ಲಿ ಅಕೌಂಟೆಂಟ್ ಆಗಿರುವ ದುಬೈ ಕಾಲೋನಿ ನಿವಾಸಿ ರಾಜು ದೈಪುಲೆ ಎಂಬುವವರ ಮೊಬೈಲ್ ಹ್ಯಾಕ್ ಮಾಡಿ ಬಿಹಾರ ರಾಜ್ಯದ ಪಾಟ್ನಾದ ರಾಜೇಶ ಮಿಶ್ರಾ ಎಂಬಾತ ಪ್ಲಿಪ್ ಕಾರ್ಟ್ ಐಡಿಯಿಂದ ಇವರ ಐಸಿಐಸಿಐ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಬಳಿಸಿಕೊಂಡು 3 ವಿವಿಧ ಕಂಪನಿಗಳ ದುಬಾರಿ ಮೊಬೈಲ್ ಖರೀದಿಸಿ 2,85,053 ರೂ.ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ರಾಜು ದೈಪುಲೆ ಅವರು ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.





















