Home ಜಿಲ್ಲೆ ಬೆಂಗಳೂರು ಗೋ.ನಾ.ಸ್ವಾಮಿಗೆ ಜಾನಪದ ರತ್ನ ಪ್ರಶಸ್ತಿ

ಗೋ.ನಾ.ಸ್ವಾಮಿಗೆ ಜಾನಪದ ರತ್ನ ಪ್ರಶಸ್ತಿ

ಕೋಲಾರ,೧೬- ಹರಿಯಾಣ ರಾಜ್ಯದ ಗುರುಗಾಂವ್ ಕನ್ನಡ ಸಂಘದ ವತಿಯಿಂದ ಜಾನಪದ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ಪ್ರತಿ ವರ್ಷ ಕೊಡುವ ಜಾನಪದ ರತ್ನ ಪ್ರಶಸ್ತಿಗೆ ಜಿಲ್ಲೆಯ ಸುಗಟೂರು ಗ್ರಾಮದ ಅಂತರಾಷ್ಟ್ರೀಯ ಜಾನಪದ ಕಲಾವಿದ ಗೋ.ನಾ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.


ಇದೇ ತಿಂಗಳು ೨೬ ರಂದು ಹರಿಯಾಣದ ಗುರುಗಾಂವ್ ನಗರದಲ್ಲಿ ನಡೆಯಲಿರುವ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷ ಶಾಂತಕುಮಾರ್ ವೀರಣ್ಣ ನಿಂಬಾಳ ಸೇರಿದಂತೆ ಅನೇಕ ಗಣ್ಯರಿಂದ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ