
ಸೇಡಂ, ಏ,27: ಜಿಲ್ಲೆಯಲ್ಲಿರುವ ಹಲವಾರು ಸಿಮೆಂಟ್ ಕಂಪನಿ ಸೇರಿದಂತೆ ವಿವಿಧ ಕಂಪೆನಿಗಳು ಕಾನೂನು ಉಲ್ಲಂಘಿಸುತ್ತಿರುವ ಪ್ರಯುಕ್ತ ಕಾರ್ಖಾನೆಗಳ ವಿರುದ್ಧ ಕೂಡಲೇ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಇಂದು ಮಳಖೇಡ ಗ್ರಾಮದಿಂದ ಕಲಬುರ್ಗಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆಯನ್ನು ಮಾಹಿತಿ ಹಕ್ಕು ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಅಶೋಕ ಕುಮಾರ ಶೀಲವಂತ ನೇತೃತ್ವದಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಎಪ್ರಿಲ್ 30 ರಂದು ಕಲಬುರ್ಗಿ ಜಿಲ್ಲಾಧಿಕಾರಿಗಳ ಕಛೇರಿಗೆ ಬೀಗ ಜಡಿದು ಖಾರಿ ಮುಳ್ಳು ಬಡೆದು ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದರು. ಈ ವೇಳೆಯಲ್ಲಿ ಹಿರಿಯ ರಾಜಕಾರಣಿ, ಮಾಜಿ ಸಚಿವ ಎಸ್.ಕೆ.ಕಾಂತ.ರಾಘವೇಂದ್ರ ವಾಲಿಕಾರ. ಚಂದ್ರಶೇಖರ ಕಟ್ಟಿಮನಿ. ಉಮೇಶ್ ಚಾವ್ಹಣ್ ಎನ್ ಕೆ. ಅರ್ಜುನ ಅಂಬೇಡ್ಕರ್ ಸೇವಾ ಸಮಿತಿ ಉಪಾಧ್ಯಕ್ಷ ಶಿವರುದ್ರಪ್ಪ ಕಟ್ಟಿಮನಿ ವಿಜಯಕುಮಾರ್ ಉಡ್ಗಿ ಕೃಷ್ಣ ಉಡ್ಗಿ ಇನ್ನೂ ಅನೇಕ ರೈತರು ಇದ್ದರು




















