ಕೆ.ಕೆ.ಆರ್.ಟಿ.ಸಿ. ನಿಗಮದ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ

ಕಲಬುರಗಿ,ನ.01:70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೇಂದ್ರ ಕಚೇರಿಯಲ್ಲಿ ನಿಗಮದ ಅಧ್ಯಕ್ಷರಾದ ಅರುಣಕುಮಾರ. ಎಂ.ವೈ. ಪಾಟೀಲ ಅವರು ಶನಿವಾರ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ರಾಷ್ಟ್ರ ಧ್ವಜಾರೋಹಣಾ ನೆರವೇರಿಸಿದರು.

ನಂತರ ಅವರು ಮಾತನಾಡಿ, ಕನ್ನಡ ಭಾಷೆ ಅತ್ಯಂತ ಸರಳ ಮತ್ತು ಸುಲಭವಾಗಿದ್ದು, ಆಡಳಿತದ ಎಲ್ಲಾ ಹಂತದಲ್ಲಿ ಕನ್ನಡವನ್ನು ಬಳಸಬೇಕು. ಆಂಗ್ಲ ಭಾಷೆ ಕೆಲವು ಸಂದರ್ಭಗಳಲ್ಲಿ ಅನಿವಾರ್ಯವಾಗಿದ್ದರೂ ಸಹ, ಕನ್ನಡ ಭಾಷೆಯನ್ನು ಆಡಳಿತದಲ್ಲಿ ಹೆಚ್ಚು ಹೆಚ್ಚು ಬಳಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಿಗಮದ ಅಧ್ಯಕ್ಷನಾಗಿ ಇತ್ತೀಚೆಗೆ ಅಧಿಕಾರವಹಿಸಿಕೊಂಡಿದ್ದು, ನಿಗಮದ ಏಳಿಗಾಗಿ ತಾವು ಶ್ರಮಿಸುವುದಾಗಿ ತಿಳಿಸಿದರು. ನಿಗಮದ ಪ್ರಗತಿ ಮತ್ತು ಅಭಿವೃದ್ದಿಗೆ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆ.ಕೆ.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ. ಸುಶೀಲಾ ಅವರು ಮಾತನಾಢಿ, ಕನ್ನಡ ಮಾತೃ ಭಾಷೆಯನ್ನು ಆಡಳಿತದಲ್ಲಿ ಬಳಸುವ ಜೊತೆಗೆ ಕನ್ನಡ ಭಾಷೆಯ ಏಳಿಗೆಗೆ ಶ್ರಮಿಸಬೇಕು. ಸಾರಿಗೆ ನಿಗಮವು ಸಾರ್ವಜನಿಕ ಸೇವಾ ಸಂಸ್ಥೆಯಾಗಿದ್ದು, ಬಸ್ ನಿಲ್ದಾಣಗಳಲ್ಲಿ ಕನ್ನಡ ಜ್ಞಾನ ಪೀಠ ಪುರಸ್ಕøತರ ಭಾವ ಚಿತ್ರಗಳನ್ನು ಅಳವಡಿಸಿ, ಕನ್ನಡದ ಕಂಪನ್ನು ಎಲ್ಲಾ ಕಡೆ ಹರಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳು ಸೇರಿದಂತೆ ನಿಗಮದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.