
ಅಫಜಲಪುರ:ಏ.27:ವಿದ್ಯಾರ್ಥಿನಿಗೆ ಇನ್ಸ್ಟಾಗ್ರಾಮ್ ಮೂಲಕ ರಾತ್ರಿ ವೇಳೆ ಕರೆ ಮಾಡಿ ಬೆತ್ತಲೆ ಫೆÇೀಟೋಗಳನ್ನು ಮತ್ತು ಸ್ಥಾನ ಮಾಡುವಾಗ ಫೆÇೀಟೋಗಳನ್ನು ತೆಗೆದು ನನಗೆ ಕಳುಹಿಸು ಎಂದು ಲೈಂಗಿಕ ಕಿರುಕುಳ ನೀಡಿದ ಅಫಜಲಪುರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದ ವಾರ್ಡನ್ ಹಣಮಂತ ಬಿರಾದಾರ ಮೇಲೆ ಎಂ.ಬಿ.ನಗರ ಕಲಬುರಗಿ ಪೆÇಲೀಸ್ ಠಾಣೆಯಲ್ಲಿ ಪೆÇೀಕ್ಸೋ ಪ್ರಕರಣ ದಾಖಲಾಗಿದೆ.
ಕಲಬುರಗಿ ನಗರದಲ್ಲಿ ಕುಟುಂಬಸ್ಥರ ಜತೆ ವಾಸವಾಗಿದ್ದ ವಿದ್ಯಾರ್ಥಿನಿಗೆ (Instragram id no-Hemanthbiradar@ 24) ಮುಖಾಂತರ ರಾತ್ರಿ ಕರೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ.ಬೆತ್ತಲೆ ಮತ್ತು ಸ್ನಾನ ಮಾಡುವಾಗಿನ ಫೆÇೀಟೊಗಳನ್ನು ಕಳುಹಿಸು ಎಂದು ಒತ್ತಾಯ ಮಾಡಿದ್ದಾನೆ.ಅಲ್ಲದೇ ನಿನ್ನನ್ನು ಕಾರಿನಲ್ಲಿ ಬೀದರ್ ಮತ್ತು ಮಂತ್ರಾಲಯಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಮೆಸೇಜ್ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ.ಅಲ್ಲದೇ ಒಂದು ದಿನ ಮನೆಯ ಹತ್ತಿರ ಬಂದು ನೀನು ತುಂಬಾ ಚೆನ್ನಾಗಿ ಕಾಣುತ್ತಿದ್ದಿ,ನೀನು ಹೀಗೆ ಇರು ಅಂತಾ ಹೇಳುತ್ತಾನೆ.ಅಲ್ಲದೇ ನನ್ನ ಮಗಳಿಗೆ ಜೀವಬೇದರಿಕೆ ಹಾಕಿದ್ದಾನೆ.15 ಮಾರ್ಚ್ 2026ರಂದು ಮಧ್ಯಾಹ್ನ 12 ಗಂಟೆಗೆ ಈ ಘಟನೆ ನಡೆದಿದ್ದು,ನನ್ನ ಮಗಳು ಹೆದರಿ ಈ ವಿಷಯವನ್ನು ಮನೆಯಲ್ಲಿ ಹೇಳಿರುವುದಿಲ್ಲ,ಆದರೆ ದಿನನಿತ್ಯ ವಾರ್ಡನ್ ಹಣಮಂತ ಬಿರಾದಾರ ನೀಡುತ್ತಿರುವ ಕಿರುಕುಳ ತಾಳಲಾರದೆ ನಡೆದಿರುವ ಘಟನೆ ಬಗ್ಗೆ ನನ್ನ ಮುಂದೆ ಹೇಳಿದ್ದಾಳೆ ಎಂದು ವಿದ್ಯಾರ್ಥಿನಿಯ ತಂದೆ ಕಲಬುರಗಿಯ ಎಂ.ಬಿ.ನಗರ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.




















