
ಮೋದಿ ಮನವಿ
ನವದೆಹಲಿ,ಏ.೨೬- ದೇಶದ ಪ್ರಮುಖ ಅಭಿಯಾನವಾದ ೨೦೨೭ರ ಜನಗಣತಿ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಇಂದಿಲ್ಲಿ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಜನಗಣತಿ ಕೇವಲ ಸರ್ಕಾರಿ ಕೆಲಸವಲ್ಲ. ಅದು ನಮ್ಮೆಲ್ಲರ ಜವಾಬ್ದಾರಿ. ಜನರ ಭಾಗವಹಿಸುವಿಕೆ ನಿರ್ಣಾಯಕ. ಒದಗಿಸುವ ಮಾಹಿತಿ ಸಂಪೂರ್ಣವಾಗಿ ಸುರಕ್ಷಿತ ಮತ್ತು ಗೌಪ್ಯವಾಗಿಡಲಾಗುತ್ತದೆ. ೨೦೨೭ ರ ಜನಗಣತಿ ಯಶಸ್ವಿಗೊಳಿಸೋಣ” , ಈ ಅಭಿಯಾನ ದತ್ತಾಂಶ ಸುರಕ್ಷತೆ ಖಚಿತ ಪಡಿಸಲಿದೆ. ಯಾರಿಗೂ ಆತಂಕ ಬೇಡ ಎಂದಿದ್ದಾರೆ.
ಮಾಸಿಕ ರೇಡಿಯೋ ಕಾರ್ಯಕ್ರಮ ’ಮನ್ ಕಿ ಬಾತ್’ ನ ೧೩೩ ನೇ ಸಂಚಿಕೆಯಲ್ಲಿ, ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಜನರು ತಮ್ಮ ಮಾಹಿತಿಯನ್ನು ಸ್ವತಃ ನಮೂದಿಸಬಹುದು ಎಂದು ಹೇಳಿದ್ದಾರೆ.
ನಾಗರಿಕರು ನೀಡುವ ಮಾಹಿತಿ ಮತ್ತು ದತ್ತಾಂಶ ಸುರಕ್ಷಿತವಾಗಿರುತ್ತದೆ . ಈ ಅಭಿಯಾನದ ಅಡಿಯಲ್ಲಿ, ಗಣತಿದಾರರು ಮೊಬೈಲ್ ಅಪ್ಲಿಕೇಶನ್ನೊಂದಿಗೆ ಮನೆ ಮನೆಗೆ ತೆರಳಿ ದತ್ತಾಂಶ ಸಂಗ್ರಹಿಸಲಿದ್ದಾರೆ. ಈ ವೇಳೆ ಗಣತಿದಾರರಿಗೆ ನಿಖರ ಮಾಹಿತಿ ನೀಡಿ ಎಂದು ಕರೆ ನೀಡಿದ್ದಾರೆ.
ಗಣತಿದಾರರು ತಮ್ಮ ಮನೆಗಳಿಗೆ ಭೇಟಿ ನೀಡುವ ೧೫ ದಿನಗಳ ಮೊದಲು ಈ ಸೌಲಭ್ಯ ಲಭ್ಯವಿರುತ್ತದೆ ಎಂದ ಅವರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಅವರಿಗೆ ಇಮೇಲ್ ಅಥವಾ ಮೊಬೈಲ್ನಲ್ಲಿ ವಿಶೇಷ ಐಡಿ ಸಿಗುತ್ತದೆ, ಅದನ್ನು ಜನರು ತಮ್ಮ ವಿವರಗಳನ್ನು ಪರಿಶೀಲಿಸಲು ಸಿಬ್ಬಂದಿಗೆ ತೋರಿಸಬಹುದು ಎಂದು ಅವರು ತಿಳಿಸಿದ್ದಾರೆ.
ಬುದ್ಧನ ಬೋಧನೆ ಸ್ಮರಿಸಿದ ಪ್ರಧಾನಿ
ಮನದ ಮಾತಿನ ಭಾಷಣದಲ್ಲಿ, ಅವರು ಮತ್ತೊಮ್ಮೆ ಜಗತ್ತಿಗೆ ಬುದ್ಧನ ಶಾಂತಿ ಮಾರ್ಗ ಪ್ರಸ್ತುತ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ.
ಜಾಗತಿಕ ಅನಿಶ್ಚಿತತೆಯ ನಡುವೆ ಬುದ್ಧನ ಆದರ್ಶ, ಸಂದೇಶಗಳು ವರ್ತಮಾನ ಮತ್ತು ಭವಿಷ್ಯಕ್ಕೂ ಅಗತ್ಯವಾಗಿವೆ .ಜಾಗತಿಕ ಅನಿಶ್ಚಿತತೆಗೆ ಕಾರಣವಾದ ಮತ್ತು ವಿಶ್ವದ ಆರ್ಥಿಕತೆಅಸ್ತವ್ಯಸ್ತಗೊಳಿಸಿದ ಅಮೆರಿಕ-ಇರಾನ್ ಯುದ್ಧವನ್ನು ಅವರು ಉಲ್ಲೇಖಿಸಿ ಬುದ್ದನ ಸಂದೇಶ ಪಾಲಿಸಲು ಕರೆ ನೀಡಿದ್ದಾರೆ..
ಬುದ್ಧ ಪೂರ್ಣಿಮೆಗೂ ಮುನ್ನ ದೇಶವಾಸಿಗಳಿಗೆ ಶುಭ ಹಾರೈಸುತ್ತಾ, ದಕ್ಷಿಣ ಅಮೆರಿಕದ ಚಿಲಿಯಲ್ಲಿರುವ ಒಂದು ಸಂಸ್ಥೆ ಭಗವಾನ್ ಬುದ್ಧನ ಬೋಧನೆಗಳನ್ನು ಪ್ರಚಾರ ಮಾಡುತ್ತಿದೆ. ಅವರ ಬೋಧನೆಗಳು ಜನರು ಪ್ರಕೃತಿಯೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತವೆ ಎಂದು ಅವರು ಹೇಳಿದ್ದಾರೆ.
“ಶಾಂತಿ ನಮ್ಮೊಳಗೆ ಪ್ರಾರಂಭವಾಗುತ್ತದೆ ಎಂದು ಭಗವಾನ್ ಬುದ್ಧ ನಮಗೆ ಕಲಿಸಿದ್ದಾರೆ; ತನ್ನ ಮೇಲಿನ ಗೆಲುವು ಅತ್ಯಂತ ದೊಡ್ಡ ಗೆಲುವು ಎಂದು ಅವರು ನಮಗೆ ತಿಳಿಸಿದ್ದಾರೆ. ಇಂದು ಜಗತ್ತು ಎದುರಿಸುತ್ತಿರುವ ಉದ್ವಿಗ್ನತೆ ಮತ್ತು ಸಂಘರ್ಷಗಳ ನಡುವೆ, ಬುದ್ಧನ ಬೋಧನೆಗಳು ಬಹಳ ಮುಖ್ಯವಾಗಿವೆ” ಜಗತ್ತು ಭಗವಾನ್ ಬುದ್ಧನ ಬೋಧನೆಗಳನ್ನು ಅನುಸರಿಸಬೇಕೆಂದು ಪದೇ ಪದೇ ಒತ್ತಾಯಿಸಿದ್ದಾರೆ.
ಬೀಟಿಂಗ್ ದಿ ರಿಟ್ರೀಟ್ ಬಗ್ಗೆ ಪ್ರದಾನಿ ಪ್ರಶಂಸೆ
ಗಣರಾಜ್ಯೋತ್ಸವದ ಪ್ರಮುಖ ಭಾಗವಾದ ಬೀಟಿಂಗ್ ದಿ ರಿಟ್ರೀಟ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಸಮಾರಂಭವು ವಿವಿಧ ಬ್ಯಾಂಡ್ಗಳ ವೈವಿಧ್ಯಮಯ ಸಂಗೀತ ಸಂಪ್ರದಾಯಗಳನ್ನು ಪ್ರದರ್ಶಿಸುತ್ತದೆ ಮತ್ತು ಈ ಕಾರ್ಯಕ್ರಮದಲ್ಲಿ ಭಾರತೀಯ ಸಂಗೀತದ ಸೇರ್ಪಡೆ ಹೆಚ್ಚಾಗಿದೆ, ಇದನ್ನು ಜನರು ಇಷ್ಟಪಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ವರ್ಷದ ಬೀಟಿಂಗ್ ರಿಟ್ರೀಟ್ ಸಮಾರಂಭ ಬಹಳ ಸ್ಮರಣೀಯವಾಗಿತ್ತು, ವಾಯುಪಡೆ, ಭೂಸೇನೆ, ನೌಕಾಪಡೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ತಮ್ಮ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ವಾಯುಪಡೆಯ ಬ್ಯಾಂಡ್ ಸಿಂಧೂರ್ ರಚನೆಯನ್ನು ಸಂಯೋಜಿಸಿತ್ತು. ನೌಕಾ ಬ್ಯಾಂಡ್ ಮತ್ಸ್ಯ ಯಂತ್ರ ರಚನೆಗೆ ಕಾರಣವಾಗಿದೆ.. ಸೇನಾ ಬ್ಯಾಂಡ್ನ ಪ್ರದರ್ಶನ ವಂದೇ ಮಾತರಂನ ೧೫೦ ವರ್ಷಗಳು ಮತ್ತು ಕ್ರಿಕೆಟ್ನಲ್ಲಿ ಭಾರತದ ಯಶಸ್ಸನ್ನು ಸಹ ಪ್ರದರ್ಶಿಸಿದೆ ಎಂದು ಹೇಳಿದ್ದಾರೆ.
ಪರಮಾಣು ವಿಜ್ಞಾನಿಗಳಿಗೆ ಪ್ರಶಂಸೆ.
ತಮಿಳಿನಾಡಿನಕಲ್ಪಾಕಂ ಫಾಸ್ಟ್ ಬ್ರೀಡರ್ ರಿಯಾಕ್ಟರ್ ನಿರ್ಣಾಯಕ ಹಂತ ತಲುಪಿರುವುದನ್ನು ಪ್ರಧಾನಿ ನರೇಂದ್ರಮೋದಿ ಶ್ಲಾಘಿಸಿದ್ದು, ಇದನ್ನು “ಐತಿಹಾಸಿಕ ಮೈಲಿಗಲ್ಲು” ಎಂದು ಬಣ್ಣಿಸಿದ್ದಾರೆ.
ಭಾರತದ ಪರಮಾಣು ವಿಜ್ಞಾನಿಗಳು ದೇಶಕ್ಕೆ ಕೀರ್ತಿ ತಂದಿದ್ದಾರೆ, ಅವರು ನಾಗರಿಕ ಪರಮಾಣು ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.
ಪರಮಾಣು ವಿಜ್ಞಾನಿಗಳು ಒಂದು ಪ್ರಮುಖ ಸಾಧನೆ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ತಮಿಳುನಾಡಿನ ಕಲ್ಪಾಕಂನಲ್ಲಿರುವ ವೇಗದ ತಳಿ ರಿಯಾಕ್ಟರ್ ನಿರ್ಣಾಯಕ ಹಂತವನ್ನು ತಲುಪಿದೆ”.”ಭಾರತದ ಪರಮಾಣು ಕಾರ್ಯಕ್ರಮಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ ಎಲ್ಲರನ್ನು ಅಭಿನಂದಿಸುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.

























