Home ಜಿಲ್ಲೆ ಕಲಬುರಗಿ ಮಕ್ಕಳ ಬದುಕಿಗೆ ಶಿಕ್ಷಣ ಅವಶ್ಯಕ: ಶಿವಸಿದ್ದೇಶ್ವರ ಮಹಾಸ್ವಾಮಿಗಳು

ಮಕ್ಕಳ ಬದುಕಿಗೆ ಶಿಕ್ಷಣ ಅವಶ್ಯಕ: ಶಿವಸಿದ್ದೇಶ್ವರ ಮಹಾಸ್ವಾಮಿಗಳು

ಕಲಬುರಗಿ,ಏ 18: ನಗರದ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ಹಾಗೂ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ತುಮಕೂರು ಸಿದ್ದಗಂಗೆಯ ಕಿರಿಯ ಶ್ರೀ ಪೂಜ್ಯ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಇಂದು ಮಕ್ಕಳ ಬದುಕಿಗೆ ಶಿಕ್ಷಣ ಅವಶ್ಯಕವಾಗಿದೆ. ಶಿಕ್ಷಣ ಬದುಕಿನ ಮಂತ್ರವಾಗಿದೆ. ಶಿಕ್ಷಣಕ್ಕೆ ಜಗತ್ತನ್ನೇ ಬದಲಾಯಿಸುವ ಶಕ್ತಿ ಇದೆ. ಹಣಕ್ಕಿಂತ ಜ್ಞಾನವೇ ಮುಖ್ಯ. ಮಕ್ಕಳ ಜೀವನ ಬಂಗಾರದಂತಹ ಜೀವನ. ಆ ಮಕ್ಕಳಿಗೆ ಜ್ಞಾನವೇ ನಿಜವಾದ ಸಂಪತ್ತು. ಸಿರಿ ಸಂಪತ್ತು, ಹಣ, ಒಡವೆ, ವಸ್ತು ನಮ್ಮದಲ್ಲ. ನಮ್ಮ ಒಡವೆ ಎನ್ನುವುದು ನಮ್ಮ ಜ್ಞಾನರತ್ನವಾಗಿದೆ ಎಂದರು.
ಮುಂದುವರೆದು ಪೂಜ್ಯರು ಮಾತನಾಡುತ್ತ, ಸಾಧನೆಗೆ ಯಾವುದೇ ಕಷ್ಟಗಳು ಬಡತನ ಅಡ್ಡಿಯಾಗುವುದಿಲ್ಲ. ಪಾಲಕರು ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಮಕ್ಕಳ ಅಭಿವೃದ್ಧಿಗೆ ಶ್ರಮಿಸುವರು. ಮಕ್ಕಳ ಬದುಕು ಹಸನಾಗಿಸಲು ಪ್ರಯತ್ನಿಸುವರು. ಪಾಲಕರ ಕಷ್ಟವನ್ನು ಅರಿತು ಮಕ್ಕಳು ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ಅಡ್ಡದಾರಿ ಹಿಡಿದು ಶ್ರೀಮಂತರಾಗುವ ಆಸೆಗೆ ಬಲಿಯಾಗದೆ ಜ್ಞಾನದ ದಾಹಕ್ಕೆ ಒಳಗಾಗಿ ಒಳ್ಳೆಯ ಆಚಾರವಂತರಾಗಬೇಕು ಎಂದರು.
ವಿದ್ಯಾರ್ಥಿಗಳು ಯೋಗ ಧ್ಯಾನ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಉತ್ತಮವಾದ ಚಾರಿತ್ರ್ಯ ಹೊಂದಿರಬೇಕು. ಮಧ್ಯಪಾನ ಧೂಮಪಾನ ದಂತಹ ದುಶ್ಚಟಕ್ಕೆ ಒಳಗಾಗಬಾರದು. ಜೀವನದ ಪ್ರತಿಯೊಂದು ಕ್ಷಣವೂ ಬದುಕಿನ ಅಮೂಲ್ಯವಾದ ಸಂಪತ್ತು ಎಂದು ಅರ್ಥ ಮಾಡಿಕೊಳ್ಳಬೇಕು. ಪಠ್ಯಪುಸ್ತಕದೊಂದಿಗೆ ಉತ್ತಮ ಸಂಸ್ಕøತಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜಗತ್ತಿನ ದಾರ್ಶನಿಕರಲ್ಲಿ ಒಬ್ಬರಾದ ಅರಿಸ್ಟಾಟಲ್ ಅವರು ಹೇಳುವಂತೆ ಜಗತ್ತಿನಲ್ಲಿ ಹೇಳಬೇಕಾದದ್ದೆಲ್ಲ ಹೇಳಿದ್ದಾಗಿದೆ ಆಚರಣೆಯಲ್ಲಿ ತರುವುದು ಅಗತ್ಯವಾಗಿದೆ. ಜಗತ್ತಿನಲ್ಲಿ ಜನಸಂಖ್ಯೆ ಇದ್ದಷ್ಟು ಉಪದೇಶಗಳ ಸಂಖ್ಯೆ ಇದೆ. ಆದರೆ ಆಚರಣೆಯಲ್ಲಿ ಬರುತ್ತಿರುವುದು ಕೇವಲ ಬೆರಳೆಣಿಕೆ ಎಷ್ಟು ಮಾತ್ರ. ಆದ್ದರಿಂದ ಉತ್ತಮ ಸಂಸ್ಕøತಿಯನ್ನು ಆಚರಿಸಬೇಕೆಂದು ಆಶೀರ್ವಚನ ನೀಡಿದರು.
ಸಂಸ್ಥೆಯ ಸಂಸ್ಥಾಪಕರಾದ ಪೆÇ್ರಫೆಸರ್ ಚೆನ್ನಾರೆಡ್ಡಿ ಪಾಟೀಲ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ನಿಡುಗುಂದಿಯ ಕಂಚಾಳಕುಂಟಿ ನಂದೀಶ್ವರ ಮಠದ ಕರುಣೇಶ್ವರ ಮಹಾಸ್ವಾಮಿಗಳು, ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ ದೇವೆಂದ್ರಪ್ಪ ಆವಂಟಿ, ಸಂಸ್ಥೆಯ ಅಧ್ಯಕ್ಷರಾದ ಗೀತಾ ಚನ್ನಾರೆಡ್ಡಿ ಪಾಟೀಲ್ ಅವರು, ಸಂಸ್ಥೆಯ ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕ್ ಚನ್ನಾರೆಡ್ಡಿ ಪಾಟೀಲ್, ಸಂಗೀತಾ ಅಭಿಷೇಕ್ ಪಾಟೀಲ, ಡಾ. ರಾಕೇಶ್ ಚನ್ನಾರೆಡ್ಡಿ ಪಾಟೀಲ್, ಡಾ. ಶೋಭಾ ರಾಕೇಶ್ ಪಾಟೀಲ, ಪ್ರಾಚಾರ್ಯ ಪ್ರಶಾಂತ್ ಕುಲಕರ್ಣಿ,ಪ್ರಭುಗೌಡ ಸಿದ್ದಾರಡ್ಡಿ, ಕರುಣೇಶ್ ಹಿರೇಮಠ, ಗುರುರಾಜ್ ಕುಲಕರ್ಣಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.