
ಗದಗ,ಏ.೧೫: ಗದಗ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ಮನರಂಜನಾ ಕೂಟದ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ೧೩೫ ನೇ ಜನ್ಮ ದಿನಾಚರಣೆ ಆಚರಿಸಲಾಯಿತು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಸಾಮೂಹಿಕವಾಗಿ ಪುಷ್ಪಾರ್ಚನೆ ಸಲ್ಲಿಸಿದರು.
ಬಳಿಕ ಡಾ.ಅಂಬೇಡ್ಕರ್ ಜೀವನ ಸಾಧನೆ, ಸಮಾನತೆಯ ಹೋರಾಟ, ಅಸ್ಪಶ್ಯತೆ ನಿರ್ಮೂಲನೆ, ಸ್ತಿçà ಸಮಾನತೆ ಕುರಿತ ಗೀತೆಗಳ ಗಾಯನ ಕಾರ್ಯಕ್ರಮವನ್ನು ಎಸ್.ವಿ.ಹಿರೇಮಠ, ಪೋತರಾಜ ಸಾಕಿ ಅವರು ಪ್ರಸ್ತುತಪಡಿಸಿದರು.
ಅಂಚೆ ನಿರೀಕ್ಷಕ ನಾಗರಾಜ ಮಳ್ಳಿ, ಪ್ರಧಾನ ಅಂಚೆ ಪಾಲಕ ಡಿ.ಜಿ.ಮ್ಯಾಗೇರಿ, ವಿ.ಎಂ.ಅAಗಡಿ, ಮಂಜುನಾಥ ಕುರಿಯವರ, ಮಂಜುನಾಥ ಪಾಮೇನಹಳ್ಳಿ, ಮನೋಹರ ಕಡಿಯವರ, ವೆಂಕಟೇಶ ಆಕಳವಾಡಿ, ಶರಣಪ್ಪ ಬೇನಾಳ, ಸಿದ್ಧಲಿಂಗೇಶ ಯಂಡಿಗೇರಿ, ಉಮೇಶ ಸಂದಿಮನಿ, ಲಕ್ಷಿ÷್ಮÃ ಮಾದರ, ಶಿವಯ್ಯ ಮತ್ತಿತರರು ಪಾಲ್ಗೊಂಡಿದ್ದರು.






















