Home ಜಿಲ್ಲೆ ಕಲಬುರಗಿ ತೂಕದಲ್ಲಿ ವ್ಯತ್ಯಾಸ, ಬಂದೂಕವಾಲಾ ವೇ ಬ್ರಿಡ್ಜ್ ಸೀಜ್

ತೂಕದಲ್ಲಿ ವ್ಯತ್ಯಾಸ, ಬಂದೂಕವಾಲಾ ವೇ ಬ್ರಿಡ್ಜ್ ಸೀಜ್

ಕಲಬುರಗಿ,ನ.3-ವೇ ಬ್ರಿಡ್ಜ್ ತೂಕದಲ್ಲಿನ ವ್ಯತ್ಯಾಸದ ಅರೋಪದ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಕಪನೂರ ಪ್ರದೇಶದಲ್ಲಿರುವ ಬಂದೂಕವಾಲಾ ವೇ ಬ್ರಿಡ್ಜ್ ಮೇಲೆ ಕಾನೂನು ಮಾಪನಶಾಸ್ತ್ರ ಅಧಿನಿಯಮ-2009ರ ಪ್ರಕಾರ ಮೊಕದ್ದಮೆ ಹೂಡಿ ವೇ- ಬ್ರೀಡ್ಜ್ ಸೀಜ್ ಮಾಡಲಾಗಿದೆ.
ಗುಲಬರ್ಗಾ ಲಾರಿ ಮಾಲೀಕರ ಸಂಘ (ರಿ) ಕಲಬುರಗಿ ರವರ ದೂರಿನ ಮೇರೆಗೆ ಕಾನೂನು ಮಾಪನ ಇಲಾಖೆಯ ಅಧಿಕಾರಿಗಳು ಸೋಮವಾರ ವಾಹನ ಸಂಖ್ಯೆ ಏಂ-29 ಃ7052 ನ್ನ ಕೇಂದ್ರ ಉಗ್ರಾಣ ಸಂಸ್ಥೆ ಕಲಬುರಗಿಯಲ್ಲಿ ಟೆಸ್ಟ್ ವೇಟ್ ಸಹಾಯದಿಂದ ತೂಕ ಮಾಡಿಸಿ, ತದನಂತರ ಸದರಿ ವಾಹನವನ್ನು ಮೆ.ಬಂದೂಕವಾಲಾ ವೇಯಿಂಗ್ ಸರ್ವಿಸ
ವೇ-ಬ್ರೀಡ್ಜ್ ನಲ್ಲಿ ತೂಕ ಮಾಡಿಸಿದಾಗ ತೂಕದಲ್ಲಿ 80-100 ಕೆ.ಜಿ ವ್ಯತ್ಯಾಸ ಕಂಡು ಬಂದಿದ್ದ ಹಿನ್ನೆಲೆಯಲ್ಲ ಸದರಿ ವೇ-ಬ್ರಿಡ್ಜ್ ಜಪ್ತಿ ಮಾಡಲಾಗಿದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು ಗ್ರೇಡ್-1ವರಫೀಕಸಾಬ ಲಾಡಜಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗುಲಬರ್ಗಾ ಲಾರಿ ಮಾಲೀಕರ ಸಂಘ (ರಿ) ಗುಲಬರ್ಗಾ ಅಧ್ಯಕ್ಷ ಮೊಹ್ಮದ ಮೊಯಿನುದ್ದೀನ್, ಕಾರ್ಯದರ್ಶಿ ವಿ.ಆರ್ ಸ್ವಾಮಿ ಹಾಗೂ ಇತರ ಸದಸ್ಯರು ಮತ್ತು ವೇ-ಬ್ರೀಡ್ಜ್ ಮಾಲೀಕ ಅಯ್ಯುಬ್ ಬಂದೂಕವಾಲಾ ಸಹ ಇದ್ದರು.