
ಕಲಬುರಗಿ,ಫೆ.3-ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2026-27ನೇ ಸಾಲಿನ ಮುಂಗಡ ಪತ್ರದಲ್ಲಿ ರಾಜ್ಯಕ್ಕೆ, ಕಲ್ಯಾಣ ಕರ್ನಾಟಕ ಬಾಗಕ್ಕೆ ನಿರಾಸೆ ಮೂಡಿಸಿದೆ. , ಯಾವುದೇ ಜನಪರ ಯೋಜನೆ, ಅಭಿವೃದ್ಧಿ ಕೆಲಸಗಳನ್ನು ಘೋಷಣೆ ಮಾಡದೆ ಇರುವ ನಿರಾಶದಾಯಕ ಬಜೆಟ್ ಇದಾಗಿದೆ ಎಂದು ಕೆಕೆಆರ್‍ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರ 2026-27ನೇ ಸಾಲಿನ ಆಯವ್ಯಯ ಕಳೆದ ಬಾರಿಗಿಂತ ಶೇ.5.56 ರಷ್ಟು ಹೆಚ್ಚಿನ ಗಾತ್ರದೊಂದಿಗೆ 53,47,315 ಕೋಟಿ ರೂ. ಮೊತ್ತದ್ದಾಗಿದ್ದರೂ ಕರ್ನಾಟಕ ರಾಜ್ಯ, ಅದರಲ್ಲೂ ಹಿಂದುಳಿದಿರುವ ಕಲ್ಯಾಣ ಕರ್ನಾಟಕಕ್ಕೆ ನ್ಯಾಯ ದೊರಕಿಸಲು ಸಾಧ್ಯವಾಗಿಲ್ಲ ಎಂದು ಡಾ. ಅಜಯ್ ಸಿಂಗ್ ಟೀಕಿಸಿದ್ದಾರೆ.
ನೀರಾವರಿ, ರೈತರ ಬೆಳವಿಮೆಯಂತಹ ಮಹತ್ವದ ರಂಗಗಳಿಗೆ ಬಜೆಟ್ ಏನನ್ನೂ ಕೊಡುಗೆ ನೀಡಿಲ್ಲ. ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕಕ್ಕೆ ಬಜೆಟ್ ಕೊಡುಗೆ ಏನೇನೂ ಇಲ್ಲ, ಬಜೆಟ್‍ನಲ್ಲಿ ಎಸ್ಸಿ, ಎಸ್ಟಿ, ಓಬಿಸಿಗೆ ಆದ್ತೆ ನೀಡಿಲ್ಲ. ವಿಶೇಷವಗಿ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿದ ನಿರ್ಣಯದಂತೆ ಕಲ್ಯಾಣ ನಾಡಿಗೆ ಅಭಿವೃದ್ಧಿ ಅನುದಾನ ರೂಪದಲ್ಲಿ 5 ಸಾವಿರ ಕೋಟಿ ರು ಕೊಡದೆ ಕೇಂದ್ರ ಹಿಂದುಳಿದ ನೆಲಕ್ಕೆ ಅನ್ಯಾಯ ಮಾಡಿದೆ
ಕಳೆದ 13 ವರ್ಷಗಳಲ್ಲಿ ರಾಜ್ಯ ಸರ್ಕಾರ ಕೆಕೆಆರ್‍ಡಿಬಿಗೆ 5 ಸಾವಿರ ಕೋಟಿ ರು ನಂತೆ ಇದುವರೆಗೂ 13 ಸಾವಿರ ಕೋಟಿ ರು ನೀಡಿತ್ತು. ಕಲೆದ 14 ವರ್ಷ ಅದಿಕಾರದಲ್ಲಿರುವ ಕೇಂದ್ರ ನಯಾ ಪೈಸೆ ಅಭಿವೃದ್ಧಿ ಅನುದಾನ ಕಲ್ಯಾಣ ನಾಡಿಗೆ ಬಿಡುಗಡೆ ಮಾಡದೆ ಅಲಕ್ಷಿಸಿದೆ.
ರಾಜ್ಯದ ನೀರಾವರಿ ಯೋಜನೆ ಬಗ್ಗೆಯೂ ಚಕಾರ ಎತ್ತಿಲ್ಲ, ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಮಾಡಬೇಕೆಂಬ ನಮ್ಮ ಬೇಡಿಕೆಯೂ ಕೈಗೂಡಿಲ್ಲ. ರಾಯಚೂರು ಏಮ್ಸ್ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ. 371ಜೆ ಅನ್ವಯ ವಿಶೇಷ ಮೀಸಲಾತಿ ಸೌಲಭ್ಯ ಪಡೆದಿರುವ ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕೆ.ಕೆ.ಆರ್.ಡಿ.ಬಿ ಮಂಡಳಿಗೆ ನಮ್ಮ ಸರ್ಕಾರ ಪ್ರತಿ ವರ್ಷ 5,000 ಕೋಟಿ ರೂ ರಾಜ್ಯ ಸರ್ಕಾರ ನೀಡುತ್ತಿದೆ, ಅದರಷ್ಟೇ ಮೊತ್ತದ ಹಣ ನೀಡುವಂತೆ ಕೇಂದ್ರಕ್ಕೆ ಕೋರಲಾಗಿತ್ತು. ಅದಕ್ಕೂ ಸೊಪ್ಪು ಹಾಕಿಲ್ಲವೆಂದು ಅಸಮಾಧಾನ ಹೊರಹಾಕಿದ್ದಾರೆ.
ತಲಾ ಆದಾಯದಲ್ಲಿ ರಾಜ್ಯವೇ ನಂಬರ್ ಒನ್. ದೇಶಕ್ಕೆ ನಮ್ಮ ಕಡುಗೆ ಶೇ. 8. 7 ರಷ್ಟಿದ್ದರೂ ಅದಕ್ಕೆ ಪ್ರತಿಯಾಗಿ ನಮಗೆ ಬರಬೇಕಿದ್ದ ಜಿಎಸ್‍ಟಿಯಲ್ಲಿ 2000 ಕೋಟಿ ರು ನಷ್ಟ ಮಾಡಲಾಗಿದೆ.
16ನೇ ಹಣಕಾಸು ಅನುದಾನದಲ್ಲಿಯೂ ತಾರತಮ್ಯವಾಗಿದೆ. 14ನೇ ಹಣಕಾಸಿನ ಆಯೋಗದ ವರದಿಯಲ್ಲಿ ಕರ್ನಾಟಕಕ್ಕೆ ಶೇ.4.71 ತೆರಿಗೆ ಪಾಲು ಸಿಕ್ಕಿತ್ತು. ಆದರೆ 15ನೇ ಹಣಕಾಸು ಆಯೋಗದಲ್ಲಿ ಅದು ಶೇ.3.64ಕ್ಕೆ ಇಳಿದಿದ್ದರಿಂದ ಶೇ.23ರಷ್ಟು ನಷ್ಟವಾಗಿತ್ತು. 16ನೇ ಹಣಕಾಸು ಶಿಫಾರಸ್ಸಿಗೂ ಮದಲೇ ವಾದ ಮಂಡಿಸಿ ಹೆಚ್ಚಿನ ಪಾಲಿಗೆ ಕೋರಲಾಗಿತ್ತು, ಇಷ್ಟಾದರೂ 16ನೇ ಹಣಕಾಸು ಆಯೋಗದಲ್ಲಿ ಶೇ.4.131 ರಷ್ಟು ಮಾತ್ರ ಕೊಟ್ಟಿದ್ದಾರೆ, ಇದು ರಾಜ್ಯಕ್ಕೆ ಮಾಡಿರುವ ಮಲತಾಯಿ ಧೋರಣೆಯಾಗಿದೆ.
ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಮುಂದಿನ 5 ವರ್ಷಗಳಿಗೆ ಮಾಡಿರುವ ಅನುದಾನ ಹಂಚಿಕೆಯಲ್ಲೂ ಅನ್ಯಾಯವಾಗಿದೆ. ಉತ್ತರ ಪ್ರದೇಶಕ್ಕೆ 1,16,804 ಕೋಟಿ ರೂ., ಮಹಾರಾಷ್ಟ್ರ ರಾಜ್ಯಕ್ಕೆ 79,620 ಕೋಟಿ ರೂ.ರಾಜಸ್ಥಾನಕ್ಕೆ 44,147 ಕೋಟಿ ರೂ., ಗುಜರಾತ್ ರಾಜ್ಯಕ್ಕೆ 42,566 ಕೋಟಿ ರೂ., ತಮಿಳುನಾಡು ರಾಜ್ಯಕ್ಕೆ 41,999 ಕೋಟಿ ರೂ. ನೀಡಿದರೆ ಕರ್ನಾಟಕಕ್ಕೆ ನೀಡಿರುವುದು 37,372 ಕೋಟಿ ರೂ. ಮಾತ್ರ. ಹೆಚ್ಚಿನ ಅನುದಾನ ಉತ್ತರದ ರಾಜ್ಯಗಳಿಗೆ ನೀಡಿ ಅನ್ಯಾಯ ಮಾಡಲಾಗಿದೆ , ಇದು ಕೇಂದ್ರದ ಮಲತಾಯಿ ಧೋರಣೆ ಎಂದು ಡಾ. ಅಜಯ್ ಸಿಂಗ್ ಟೀಕಿಸಿದ್ದಾರೆ.
ದೇಶದಲ್ಲಿ ತಲಾ ಆದಾಯದಲ್ಲಿ ರಾಜ್ಯ ನಂಬರ್-1 ಸ್ಥಾನದಲ್ಲಿದೆ. ಜಿ.ಎಸ್.ಟಿ. ಸಂಗ್ರಹಣೆಯಲ್ಲಿ ದೇಶದಲ್ಲಿಯೇ ನಾವು ದ್ವಿತೀಯ ಸ್ಥಾನದಲ್ಲಿದ್ದೇವೆ. ಸುಮಾರು 4.50 ರಿಂದ 5 ಲಕ್ಷ ಕೋಟಿ ರೂ. ತೆರಿಗೆ ಕೇಂದ್ರ ಸರ್ಕಾರಕ್ಕೆ ನೀಡುತ್ತೇವೆ. ಆದರೆ ಇದರಲ್ಲಿ ನಮಗೆ ಬರೋದು ಒಂದು ರೂಪಾಯಿಗೆ ಕೇವಲ 14 ಪೈಸೆ ಮಾತ್ರ. ಉಳಿದಿದ್ದೆಲ್ಲ ಕೇಂದ್ರ ಸರಕಾರವೇ ಬಳಸಿಕೊಳ್ಳುತ್ತಿದೆ. ಇದು ಕೇಂದ್ರದಿಂದ ಕರ್ನಾಟಕಕ್ಕೆ ಆಗುತ್ತಿರುವ ಮತ್ತೊಂದು ದೊಡ್ಡ ಅನ್ಯಾಯವೆಂದೂ ಡಾ. ಅಜಯ್ ಸಿಂಗ್ ಕೇಂದ್ರ ಬಜೆಟ್‍ನಲ್ಲಿ ರಾಜ್ಯ ಸಂಪೂರ್ಣ ಅಲಕ್ಷಿಸಲ್ಪಟ್ಟಿದೆ ಎಂದು ದೂರಿದ್ದಾರೆ.























