Home ಜಿಲ್ಲೆ ದತ್ತಿ ಉಪನ್ಯಾಸ

ದತ್ತಿ ಉಪನ್ಯಾಸ


ಲಕ್ಷೆö್ಮÃಶ್ವರ,ಮೇ.೪:
“ಕನ್ನಡ ಕೇವಲ ಒಂದು ಭಾಷೆಯಲ್ಲ. ಅದೊಂದು ಅಸ್ಮಿತೆ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡದ ಹಿರಿಮೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬ ಕನ್ನಡಿಗರಿಂದಲೂ ಆಗಬೇಕು” ಎಂದು ಖ್ಯಾತ ವೈದ್ಯ ಡಾ.ಪಿ.ಡಿ.ತೋಟದ ಅಭಿಪ್ರಾಯಪಟ್ಟರು. ಅವರು ಲಕ್ಷೆ÷್ಮÃಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಲಕ್ಷೆ÷್ಮÃಶ್ವರದ ದಿ ಯೂನಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ದತ್ತಿ ಉಪನ್ಯಾಸಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಗಣ್ಯ ವ್ಯಾಪಾರಸ್ಥರಾದ ಶಿವಣ್ಣ ಕೋಳಿವಾಡ ಇವರು ಕೊಡ ಮಾಡಿದ ದತ್ತಿ “ಕನ್ನಡ ಭಾಷೆ-ಕನ್ನಡಿಗರ ಅಸ್ಮಿತೆ” ವಿಷಯದ ಕುರಿತು ಮಾತನಾಡಿದ ಉಪನ್ಯಾಸಕ ರವಿ ನೀರಲಗಿ “ಕನ್ನಡ ಭಾಷೆಯು ಕನ್ನಡಿಗರ ಪಾಲಿಗೆ ಕೇವಲ ಸಂವಹನ ಮಾಧ್ಯಮವಲ್ಲ, ಅದು ನಮ್ಮ ಸಂಸ್ಕöÈತಿ, ಇತಿಹಾಸ ಮತ್ತು ಅಸ್ಮಿತೆಯ ತಳಹದಿಯಾಗಿದೆ. ಸುದೀರ್ಘ,ಶ್ರೀಮಂತ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯು ಕನ್ನಡಿಗರನ್ನು ಭಾವನಾತ್ಮಕವಾಗಿ ಒಂದುಗೂಡಿಸುವ ಮಹತ್ವದ ಶಕ್ತಿಯಾಗಿದೆ”ಎಂದರು.


ಡಾ.ಪಿ.ಡಿ.ತೋಟದ ಕೊಡ ಮಾಡಿದ ದತ್ತಿ “ಜಾನಪದ- ಜಾಣರ ಪದ” ವಿಷಯದ ಕುರಿತು ಮಾತನಾಡಿದ ಶಿಕ್ಷಕ ಸಾಹಿತಿ ಆರ್.ಎಸ್.ಪಾಟೀಲ “ನಮ್ಮ ಆಚಾರ-ವಿಚಾರ, ಹಬ್ಬ-ಹರಿದಿನ, ಮತ್ತು ಮಾನವೀಯ ಸಂಬAಧಗಳ ಮಹತ್ವವನ್ನು ಈ ಜಾನಪದ ಸಾಹಿತ್ಯ ಕಲಿಸುತ್ತದೆ. ಮೌಕಿಕ ಪರಂಪರೆಯಾದ ಇದು ಸಮಾಜವನ್ನು ಮುನ್ನಡೆಸುವ “ಜಾಣ” ಮಾರ್ಗವಾಗಿದೆ” ಎಂದರು. ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಯೂನಿಕ್ ಶಾಲೆಯ ಮುಖ್ಯೋಪಾಧ್ಯಾಯ ಅರವಿಂದ ದೇಶಪಾಂಡೆ “ವ್ಯವಹಾರಿಕ ಭಾಷೆ ಇಂಗ್ಲಿಷ್ ಇದ್ದರೂ ಅಂತರAಗದ ಭಾಷೆಯಾಗಿ ಕನ್ನಡ ಬೇಕೇ ಬೇಕು”ಎಂದರು. ಇನ್ನೋರ್ವ ಮುಖ್ಯ ಅತಿಥಿ ಕು.ಚೇತನಾ ಕೋಳಿವಾಡ “ಸಮಕಾಲೀನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಅದಷ್ಟೇ ಮುಂದುವರೆದಿದ್ದರೂ ಕನ್ನಡ ಭಾಷೆ ನಮ್ಮ ಅಸ್ತಿತ್ವವನ್ನು ಪ್ರತಿನಿಧಿಸುತ್ತದೆ” ಎಂದರು.


ಲಕ್ಷೆ÷್ಮÃಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿ ತಾಲೂಕ ಘಟಕ ನಡೆದು ಬಂದ ಹಾದಿ ಹಾಗೂ ಮುಂದಿನ ಯೋಜನೆಗಳನ್ನು ವಿವರಿಸಿದರು. ಸಾಹಿತಿ ಸುರೇಶ ತಂಗೋಡ ಜನಪದ ಸಾಹಿತ್ಯದ ಕುರಿತು ಮಾತನಾಡಿದರು.


ದತ್ತಿಧಾನಿಗಳು ಹಾಗೂ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ನಾಗರಾಜ್ ಮಜ್ಜಿಗುಡ್ಡ ಈರಣ್ಣ ಗಾಣಿಗೇರ ಎಸ್ ಬಿ ಅಣ್ಣಿಗೇರಿ ವೀರಣ್ಣ ಅಕ್ಕೂರ ನಿರ್ವಹಿಸಿದರು. ಶಿಕ್ಷಕರಾದ ಶಶಿಕಾಂತ ಕುಂಬಾರ, ಸಿ.ಎಫ್.ಪಾಟೀಲ,ಎಲ್.ಆರ್.ಮಲಸಮುದ್ರ, ಪ್ರವೀಣ ಕುಂಬಾರ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.