
ಗುರುಮಠಕಲ್: ಏ.೩:ಆಹಾರ ಪಡಿತರ ಚೀಟಿಗಳನ್ನು ಬಿ.ಪಿ.ಎಲ್ (ಃPಐ) ನಿಂದ ಎ.ಪಿ.ಎಲ್ (ಂPಐ) ವರ್ಗಕ್ಕೆ ಪರಿವರ್ತಿಸುವ ಕುರಿತಂತೆ ಸಲ್ಲಿಕೆಯಾಗಿರುವ ಅರ್ಜಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕಾಕಲವಾರ ಗ್ರಾಮಕ್ಕೆ ಮನೆ ಮನೆಗೆ ಭೇಟಿ ನೀಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳಾದ ಅನ್ವರ್ ಹುಸೇನ್ ಅವರು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, “ಸರ್ಕಾರದ ನಿರ್ದೇಶನದಂತೆ ಬಿ.ಪಿ.ಎಲ್ ಕಾರ್ಡ್ಗಳ ವರ್ಗಾವಣೆ ಮತ್ತು ಪರಿಷ್ಕರಣೆಗೆ ಸಂಬAಧಿಸಿದ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಇಲಾಖೆಯ ಸಿಬ್ಬಂದಿಗಳು ಗ್ರಾಮಗಳ ಪ್ರತಿಯೊಂದು ಮನೆಗೆ ಭೇಟಿ ನೀಡಿ, ಅರ್ಜಿದಾರರ ಆರ್ಥಿಕ ಸ್ಥಿತಿಗತಿ ಮತ್ತು ಅರ್ಹತೆಯನ್ನು ಖಚಿತಪಡಿಸಿಕೊಂಡಿದ್ದಾರೆ” ಎಂದರು ಪರಿಶೀಲನೆಯ ಸಮಯದಲ್ಲಿ ಪತ್ತೆಯಾದ ಅರ್ಹ ಮತ್ತು ಅನರ್ಹ ಬಿ.ಪಿ.ಎಲ್ ಪಡಿತರ ಚೀಟಿಗಳ ಸಂಪೂರ್ಣ ಮಾಹಿತಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಮುಂದಿನ ಕ್ರಮಕ್ಕಾಗಿ ಸಂಬAಧಪಟ್ಟ ಮೇಲಾಧಿಕಾರಿಗಳಿಗೆ ವರದಿಯನ್ನು ರವಾನಿಸಲಾಗಿದೆ.
ಅರ್ಹ ಬಡ ಕುಟುಂಬಗಳಿಗೆ ಮಾತ್ರ ಬಿ.ಪಿ.ಎಲ್ ಸೌಲಭ್ಯ ದೊರೆಯಬೇಕು ಎಂಬ ಉದ್ದೇಶದಿಂದ ಈ ಕಾರ್ಯಚರಣೆ ನಡೆಸಲಾಗುತ್ತಿದೆ. ಸಾರ್ವಜನಿಕರು ಇಲಾಖೆಯ ಈ ನಿಯಮಗಳಿಗೆ ಸಹಕರಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಬಿ.ಪಿ.ಎಲ್ ಕಾರ್ಡ್ ಪರಿಶೀಲನೆ ಚುರುಕು: ಮನೆ ಮನೆಗೆ ಭೇಟಿ ನೀಡಿದ ಅಧಿಕಾರಿಗಳು
ಅನ್ವರ್ ಹುಸೇನ್ ನೇತೃತ್ವದಲ್ಲಿ ನಡೆದ ಅರ್ಜಿಗಳ ಮರುಪರಿಶೀಲನೆ.ಅನಂದಕುಮಾರ, ರಮೇಶ, ದೇವಿಂದ್ರಪ್ಪ, ಮ?ಹಿಪಾಲ ಹಾಗೂ ಗ್ರಾಮಸ್ಥರು ಇದ್ದರು.






















