Home ಜಿಲ್ಲೆ ಕಲಬುರಗಿ ಮೋಟಾರ್, ಕೇಬಲ್ ಕಳ್ಳರ ಬಂಧನ

ಮೋಟಾರ್, ಕೇಬಲ್ ಕಳ್ಳರ ಬಂಧನ

ಕಲಬುರಗಿ,ಅ.31-ಮೋಟಾರ್ ಮತ್ತು ಕೇಬಲ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಚಿಂಚೋಳಿ ಪೊಲೀಸರು ಬಂಧಿಸಿದ್ದಾರೆ.
ಪೋಲಕಪಳ್ಳಿ ಗ್ರಾಮದ ನಾಗಪ್ಪ ತಂದೆ ಯಲ್ಲಪ್ಪ ದೊಡ್ಡಮನಿ ಮತ್ತು ಸಂಜುಕುಮಾರ ತಂದೆ ಬಸಣ್ಣ ಬುಕ್ಕಾನವರ ಎಂಬುವವರನ್ನು ಬಂಧಿಸಿ 50 ಸಾವಿರ ರೂಪಾಯಿ ಮೌಲ್ಯದ 5 ಹೆಚ್‍ಪಿ ಸಾಮಥ್ರ್ಯವುಳ್ಳ 2 ಮೋಟಾರ್ ಹಾಗೂ 100 ಮೀಟರ್ ಕೇಬಲ್ ಜಪ್ತಿ ಮಾಡಿದ್ದಾರೆ.
ತಮ್ಮ ಹೊಲಕ್ಕೆ ಮುಲ್ಲಾಮಾರಿ ನದಿಯಿಂದ ನೀರು ಹರಿಸಲು ಅಳವಡಿಸಲಾಗಿದ್ದ 50 ಸಾವಿರ ರೂಪಾಯಿ ಮೌಲ್ಯದ 5 ಹೆಚ್‍ಪಿ ಸಾಮಥ್ರ್ಯವುಳ್ಳ 2 ಮೋಟಾರ್ ಹಾಗೂ 100 ಮೀಟರ್ ಕೇಬಲ್ ಕಳವು ಮಾಡಲಾಗಿದೆ ಎಂದು ಚಿಂಚೋಳಿ ತಾಲ್ಲೂಕಿನ ಪೋಲಕಪಳ್ಳಿ ಗ್ರಾಮದ ನಂದಿಕುಮಾರ ತಂದೆ ರೇವಣಸಿದ್ದಪ್ಪ ಪಾಟೀಲ ಅವರು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಪತ್ತೆಗೆ ಚಿಂಚೋಳಿ ಉಪ ವಿಭಾಗದ ಡಿಎಸ್‍ಪಿ ಸಂಗಮನಾಥ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಚಿಂಚೋಳಿ ಸಿಪಿಐ ಕಪೀಲದೇವ ಅವರ ನೇತೃತ್ವದಲ್ಲಿ ಪಿಎಸ್‍ಐ ಗಂಗಮ್ಮ ಹಾಗೂ ಸಿಬ್ಬಂದಿಗಳಾದ ಸಿದ್ದಲಿಂಗಪ್ಪ, ಮಾಂತೇಶ ನಾಯಕ, ಯಮನೂರಪ್ಪ, ಓಂಕಾರ ಮತ್ತು ಅಶೋಕ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಪೋಲಕಪಳ್ಳಿ ಗ್ರಾಮದ ನಾಗಪ್ಪ ದೊಡ್ಡಮನಿ ಮತ್ತು ಸಂಜುಕುಮಾರ ಬುಕ್ಕಾನವರ ಎಂಬುವವರನ್ನು ಬಂಧಿಸಿ 50 ಸಾವಿರ ರೂ.ಮೌಲ್ಯದ 2 ಮೋಟಾರ್ ಮತ್ತು 100 ಮೀಟರ್ ಕೇಬಲ್ ಜಪ್ತಿ ಮಾಡಿದೆ. ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಎಸ್‍ಪಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.