
ಕಲಬುರಗಿ:ಏ.27:8 ನೇ ಶತಮಾನದಲ್ಲಿ ತನ್ನ 08ನೇ ವಯಸ್ಸಿನಲ್ಲಿ ಅದ್ವೈತ ಅಧ್ಯಯನ ಪ್ರಾರಂಭಿಸಿ, 16 ನೇ ವಯಸ್ಸಿನಲ್ಲಿಯೇ ಬರವಣಿಗೆ ಪ್ರಾರಂಭಿಸಿದ ಶಂಕರಾಚಾರ್ಯರು ಸನಾತನ ಧರ್ಮ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೇಶದ ನಾಲ್ಕು ದಿಕ್ಕುಗಳಾದ ಪೂರ್ವಕ್ಕೆ: ಪುರಿ ಗೋವರ್ಧನ ಪೀಠ, ಪಶ್ಚಿಮಕ್ಕೆ : ಶಾರದಾ ಪೀಠ, ಉತ್ತರಕ್ಕೆ: ಬದರಿನಾಥ ಪೀಠ, ದಕ್ಷಿಣಕ್ಕೆ: ಶೃಂಗೇರಿ ಪೀಠ ಈ ರೀತಿ ಧರ್ಮ ಬೆಳೆಸಲು ಪೀಠಗಳ ಸ್ಥಾಪಿಸಿ, ಜನ ಸಾಮಾನ್ಯರಿಗೆ ಅದ್ವೈತ ತತ್ವ ತಿಳಿಸಿಕೊಟ್ಟ ಆದಿ ಶಂಕರಾಚಾರ್ಯರು ಎಂದು ಬಾಪುಗೌಡ ದರ್ಶನಾಪೂರ ಶಿಕ್ಷಣ ಹಾಗೂ ವೆಲ್‍ಫೈರ್ ಸೊಸೈಟಿ ಕಾರ್ಯದರ್ಶಿ ಶ್ಯಾಮಸುಂದರ ಜೋಷಿ ಮಾತನಾಡಿದರು.
ಏಪ್ರಿಲ್-22 ರಂದು ಸೇಡಂ ರಸ್ತೆಯ ವಿದ್ಯಾನಗರದಲ್ಲಿ ನಿವೃತ್ತ ಪ್ರಾಧ್ಯಾಪಕ ಕಮಲಾಕರ ಸಂಗೋಳಗಿರವರ ಮನೆಯಲ್ಲಿ ಆದಿ ಶಂಕರಾಚಾರ್ಯರ ಜಯಂತಿ ಆಚರಿಸಿ ಮಾತನಾಡಿದರು.
ಇತ್ತೀಚಿಗೆ ಶ್ರೀವತ್ಸ್ ಸಂಗೋಳಗಿ ಅವರು ಮೆಡಿಕಲ್ ಡಿಸ್ಟ್ರಿಬ್ಯೂಟರ್ ಪ್ರಾರಂಭಿಸಿದ್ದು, ಅವರ ಉದ್ಯೋಗ ಎತ್ತರ-ಎತ್ತರವಾಗಿ ಬೆಳೆಯಲಿ ಎಂದು ತೆಂಗಳಿ ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ, ಸಂಚಾಲಕರಾದ ವಿನೋದಕುಮಾರ ಜನೇವರಿ ಅವರು ಆದಿ ಶಂಕರಾಚಾರ್ಯರ ಜಯಂತಿ ನಿಮಿತ್ಯ ಅವರ ಭಾವಚಿತ್ರ ಕೊಟ್ಟು, ಶುಭ ಕೋರಿದ ಸಂದರ್ಭದಲ್ಲಿ ಮನೆಯವರೆಲ್ಲರೂ ತುಂಬಾ ಸಂತೋಷಗೊಂಡು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಹೂ ಮಾಲೆ ಹಾಕಿ ಜಯಂತಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಕಮಲಾಕರ ಸಂಗೋಳಗಿ, ಲಲಿತಾ ಸಂಗೋಳಗಿ, ಮಲ್ಲಮ್ಮ ಭದ್ರಶೆಟ್ಟಿ, ಮಹಾನಂದ ಯಂಕಂಚಿ, ಅಂತಪ್ಪ ಪಾಟೀಲ ಶಹಾಪೂರ, ಜಯಶೀಲಾ ಶಹಾಪೂರ ಉಪಸ್ಥಿತರಿದ್ದರು.




















