
ಧಾರವಾಡ, ಮೇ ೧೨: ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಯು, ಅರಣ್ಯ, ಪರಿಸರ ಮತ್ತು ಜೀವಿಶಾಸ್ರö್ತ ಇಲಾಖೆ, ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದ್ದು, ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಹವಾಮಾನ ಬದಲಾಣೆಯ ಕುರಿತಾದ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ ಯನ್ನು ತಯಾರಿಸಿ, ೨೦೨೪ರಲ್ಲಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾಣೆ ಮಂತ್ರಾಲಯದಿAದ ಅನುಮೋದನೆಗೊಂಡಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀ¯ ಅವರು ಹೇಳಿದರು.
ಅವರು ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕುರಿತು ಜರುಗಿದ ಕ್ರಿಯಾ ಯೋಜನೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಹವಾಮಾನ ಬದಲಾಣೆಯ ವರದಿಯಲ್ಲಿನ ಕಾರ್ಯ ಅಂಶಗಳನ್ನು ಆಧಾರವಾಗಿಟ್ಟುಕೊಂಡು ವಿವಿಧ ಇಲಾಖೆಗಳು ಪ್ರಮುಖ ಕಾರ್ಯಕ್ಷಮತೆ ಸೂಚಕಗಳನ್ನು ೨೦೨೫-೨೦೩೦ರ ಅವಧಿಗೆ ಗುರಿಗಳೊಂದಿಗೆ ನಿಗದಪಡಿಸಿವೆ. ಸೂಚಕಗಳ ಅನು?Á್ಠನ ಕುರಿತು ಜಿಲಾಮಟ್ಟದ ಅಧಿಕಾರಿ ವರ್ಗ ಹಾಗೂ ಇತರೆ ಸಂಘ ಸಂಸ್ಥೆಗಳ ಸಾಮರ್ಥ್ಯ ಬೆಳವಣಿಗೆ ಉದ್ದೇಶದೊಂದಿಗೆ ಸಂಸ್ಥೆಯು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯವರ ಸಹಯೋಗದೊಂದಿಗೆ ಸಂಸ್ಥೆಯು ೨೦೨೬-೨೭ ನೇ ಸಾಲಿನಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಸದರಿ ವಿಷಯವನ್ನು ವಿಸ್ತೃತಗೊಳಿಸಿದೆ ಎಂದು ಅವರು ಹೇಳಿದರು.
ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡAತೆ ಹಲವು ಕ್ಷೇತ್ರಗಳ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಇತರೆ ಪಾಲುದಾರುಗಳ ಪ್ರತಿನಿಧಿಗಳಿಗೆ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರ ಪೋದಾರ್, ಡಾ. ಪ್ರಕಾಶ್ ಭಟ್, ಹವಾಮಾನ ಬದಲಾವಣೆ ಕೇಂದ್ರ (ಎಂಪ್ರಿ) ಹಿರಿಯ ಸಮಾಲೋಚಕ ಡಾ. ಬಿ. ಸರಿತ, ಬೆಂಗಳೂರು ಜಲ ಸಂಪನ್ಮೂಲ ಇಲಾಖೆ ಪರಿಣಿತೆ ಡಾ. ಉಷಾ ಅವರು ಮಾತನಾಡಿದರು.





















