
ಕಲಬುರಗಿ,ನ.3: ರಾಷ್ಟ್ರೀಯ ಸೇವಾ ಯೋಜನೆಯು ರಾಷ್ಟ್ರದ ಅಭಿಮಾನವನ್ನು ಹೆಚ್ಚಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುತ್ತದೆ ಎಂದು ನಿಂಬರ್ಗಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಭೀಮರಾವ್ ಅರಿಕೇರಿ ಹೇಳಿದರು.
ಅವರು ನಿಂಬರ್ಗಾ ಗ್ರಾಮದ ಧರ್ಮರಾಯ ಗುಡಿ ಆವರಣದಲ್ಲಿ ಆಯೋಜಿಸಿರುವ 2026 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಈ ಶಿಬಿರವು ಕಾಲೇಜಿನ ವಿದ್ಯಾರ್ಥಿಗಳಲ್ಲಿ ಶಿಸ್ತುಬದ್ಧ ಜೀವನವನ್ನು ಅಳವಡಿಸಿಕೊಳ್ಳಲು ಪ್ರೇರೇಪಣೆ ಮಾಡುತ್ತದೆ ಎಂದು ಹೇಳಿ ನಮ್ಮ ಕಾಲೇಜಿನಲ್ಲಿ ಈ ಶಿಬಿರವನ್ನು ಏರ್ಪಡಿಸಿರುವುದು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಹೆಚ್ಚಾಗಬೇಕು ಅಂದಾಗ ರಾಷ್ಟ್ರಪ್ರೇಮ ತನ್ನಿಂದ ತಾನೇ ಮೂಡುತ್ತದೆ ಎಂದು ಹೇಳಿದರು.
ಈ ರಾಷ್ಟ್ರೀಯ ಸೇವಾ ಯೋಜನೆಯು ಮಹಾತ್ಮ ಗಾಂಧಿ ಅವರ ಕನಸಿನ ಕೂಸಾಗಿದೆ ಗಾಂಧೀಜಿ ಜನ್ಮವಾದ ನೂರು ವರ್ಷದ ನಂತರ ಅಂದರೆ 1969 ಸೆಪ್ಟೆಂಬರ್ 24ರಂದು ರಾಷ್ಟ್ರೀಯ ಸೇವಾ ಯೋಜನೆ ಆರಂಭವಾಯಿತು ಎಂದು ಈ ಯೋಜನೆಯ ಮಹತ್ವವನ್ನು ಕುರಿತು ಸಭೆಯಲ್ಲಿ ತಿಳಿಸಿದರು.
ಕಾರ್ಯಕ್ರಮವನ್ನು ರಮೇಶ್ ಗುರಾಮಾಳಿ ಅವರು ಗಾಂಧೀಜಿ ಹಾಗೂ ವಿವೇಕಾನಂದ ಸ್ವಾಮೀಜಿ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಹಾಗೂ ನೀರುಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಆರಂಭದಲ್ಲಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಜ್ಯೋತಿ ನಿಂಗಪ್ಪ ಹಾಗೂ ವಿದ್ಯಾರ್ಥಿನಿ ಜ್ಯೋತಿ ದತ್ತಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು ಎನ್ ಎಸ್ ಎಸ್ ಅಧಿಕಾರಿ ಕಾಲೇಜಿನ ಕನ್ನಡ ಉಪನ್ಯಾಸ ರವಿಶಂಕರ್ ವಮ್ಮ ಅವರು ಈ ರಾಷ್ಟ್ರೀಯ ಸೇವಾ ಯೋಜನೆಯ ಕುರಿತು ಅದರ ಉದ್ದೇಶಗಳ ಮಹತ್ವವನ್ನು ತಮ್ಮ ಪ್ರಸ್ತಾವಿಕ ಮಾತುಗಳಲ್ಲಿ ಆಡಿದರು.ಕಾರ್ಯಕ್ರಮಕ್ಕೆ ಸ್ವಾಗತವನ್ನು ಕಾಲೇಜಿನ ಹಿರಿಯ ಗಣಿತ ಉಪನ್ಯಾಸಕ ಮಲ್ಲಿನಾಥ ನಾಟಿಕರ್ ಕೋರಿದರು.
ಕಾಲೇಜಿನ ಸಿಬ್ಬಂದಿ ವರ್ಗ ಸಿದ್ದರಾಮ ಸನಗುಂದಿ ಲಕ್ಪತಿ ರಾಜ್ ಬಡದಾಳ ವೆಂಕಟೇಶ್ ಗುಪ್ತ ತೇಜಸ್ವಿನಿ ಪಾಟೀಲ್ ರೇಣುಕಾ ಶಿರಾಗಪುರ ಶಿವಮ್ಮ ಹಾಗೂ ಊರಿನ ಪ್ರಮುಖರಾದ ಶಿವಕುಮಾರ್ ನಂದಿ ರಮೇಶ್ ಬಿ ಉಪಸ್ಥಿತರಿದ್ದರು.























